ಮೈಸೂರು: ಕೆ.ಆರ್.ಆಸ್ಪತ್ರೆಯ ಆಮ್ಲಜನಕ ಸರಬರಾಜು ಟ್ಯಾಂಕ್ ಮಂಜುಗಡ್ಡೆಯಾಗಿದ್ದರಿಂದ, ಆಕ್ಸಿಜನ್ ಪೈಪ್ ಬ್ಲಾಕ್ ಆಗಿತ್ತು. ಆದ್ರೆ ತಕ್ಷಣವೇ ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಆಗಬಹುದಾಗಿದ್ದ ಹೆಚ್ಚಿನ ಅಪಾಯ ತಪ್ಪಿದೆ.
ಮೈಸೂರಲ್ಲಿ ಆಕ್ಸಿಜನ್ ಪೈಪ್ ಬ್ಲಾಕ್.. ಭಾರಿ ಅನಾಹುತ ತಪ್ಪಿಸಿದ ಅಗ್ನಿ ಶಾಮಕ ದಳ
22:53 May 04
ಆಕ್ಸಿಜನ್ ಪೈಪ್ ಬ್ಲಾಕ್
ವಿಷಯ ಅರಿತ ಆಸ್ಪತ್ರೆಯ ಸಿಬ್ಬಂದಿ ತಕ್ಷಣವೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿತ್ತು. ನಂತರ ಸರಿಯಾದ ಸಮಯಕ್ಕೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ತಂಡ ಮಂಜುಗಡ್ಡೆಯಾಗಿದ್ದ ಯಂತ್ರಕ್ಕೆ ಘನೀಕರಿಸಿದ ನೀರನ್ನು ಸಿಂಪಡಿಸಿ ಐಸ್ ತೆರವು ಮಾಡಿತು. ಇದರಿಂದ ಬ್ಲಾಕ್ ಆಗಿದ್ದ ಆಕ್ಸಿಜನ್ ಪೈಪ್ ತೆರೆದುಕೊಂಡಿತು.
ಕೆ.ಆರ್.ಆಸ್ಪತ್ರೆಯಲ್ಲಿ ಒಟ್ಟಾರೆ 800 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಮ್ಲಜನಕ ಯಂತ್ರ ಸರಿಪಡಿಸಿ, ಕೋವಿಡ್ ರೋಗಿಗಳಿಗೆ ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ಹಾಗೂ ತಂಡಕ್ಕೆ ಕೆ.ಆರ್.ಆಸ್ಪತ್ರೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.