ಕರ್ನಾಟಕ

karnataka

ETV Bharat / city

ವ್ಯಾಕ್ಸಿನ್ ಪಡೆಯದ ಪೋಷಕರ ಮಕ್ಕಳಿಗೆ ಆನ್​ಲೈನ್ ಕ್ಲಾಸ್​​ : ಡಿಸಿ ಗೌತಮ್ ಬಗಾದಿ - ವ್ಯಾಕ್ಸಿನ್ ಪಡೆಯದ ಪೋಷಕರ ಮಕ್ಕಳಿಗೆ ಆನ್​ಲೈನ್ ಕ್ಲಾಸ್​​

ಮಾಲ್, ಥಿಯೇಟರ್‌ ಬಗ್ಗೆ ಎಚ್ಚರವಹಿಸಬೇಕು. ಜನರು ಗುಂಪು‌ ಸೇರದಂತೆ ಹಾಗೂ ಕೋವಿಡ್ ನಿಯಮ‌ ಪಾಲಿಸುವಂತೆ ಸಲಹೆ ನೀಡಿ ಎಂದರು. ಸಭೆಯಲ್ಲಿ ನಗರ ಪಾಲಿಕೆ, ಶಿಕ್ಷಣ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು..

online-classes-for-non-vaccinated-parents-children
ಡಿಸಿ ಗೌತಮ್ ಬಗಾದಿ

By

Published : Dec 4, 2021, 2:03 PM IST

ಮೈಸೂರು :ವ್ಯಾಕ್ಸಿನ್ ಹಾಕಿಸಿಕೊಳ್ಳದ ಪೋಷಕರ ಮಕ್ಕಳು, ಆನ್​ಲೈನ್ ತರಗತಿಗೆ ಹಾಜರಾಗಬಹುದು ಎಂದು ಶಾಲೆಗಳಿಗೆ ಸೂಚನೆ ನೀಡಿ ಡಿಡಿಪಿಐಗೆ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರು ಸಲಹೆ ನೀಡಿದರು.

ವ್ಯಾಕ್ಸಿನ್ ಪಡೆಯದ ಪೋಷಕರ ಮಕ್ಕಳಿಗೆ ಆನ್​ಲೈನ್ ಕ್ಲಾಸ್​​ : ಇಂದು ಒಮಿಕ್ರಾನ್ ಆತಂಕದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಡಿಸಿ ಸಭೆ ನಡೆಸಿದರು. ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳ ಪೋಷಕರ ಸಭೆ ನಡೆಸಬೇಕು.

ಪೋಷಕರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚನೆ ನೀಡಬೇಕು. ಲಸಿಕೆ ಪಡೆದ ಪೋಷಕರ ಮಕ್ಕಳು ಶಾಲೆಗೆ ಬರಲು ಹಾಗೂ ಲಸಿಕೆ ಹಾಕಿಸಿಕೊಳ್ಳದ ಪೋಷಕರ ಮಕ್ಕಳು ಆನ್​ಲೈನ್ ಕ್ಲಾಸ್​ಗೆ ಹಾಜರಾಗುವಂತೆ ಸೂಚನೆ ನೀಡಿದರು.‌ ಅಲ್ಲದೆ, ಕೊರೊನಾ ಹಾಗೂ ಒಮಿಕ್ರಾನ್ ಹರಡದಂತೆ ಎಚ್ಚರಿಕೆ ವಹಿಸಿ ಎಂದರು.

ಮಾಲ್, ಥಿಯೇಟರ್‌ ಬಗ್ಗೆ ಎಚ್ಚರವಹಿಸಬೇಕು. ಜನರು ಗುಂಪು‌ ಸೇರದಂತೆ ಹಾಗೂ ಕೋವಿಡ್ ನಿಯಮ‌ ಪಾಲಿಸುವಂತೆ ಸಲಹೆ ನೀಡಿ ಎಂದರು. ಸಭೆಯಲ್ಲಿ ನಗರ ಪಾಲಿಕೆ, ಶಿಕ್ಷಣ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು.

For All Latest Updates

TAGGED:

ABOUT THE AUTHOR

...view details