ಮೈಸೂರು:ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ವೃದ್ಧನೋರ್ವ ಸಾರ್ವಜನಿಕರ ನಿಂದನೆಗೆ ಹೆದರಿ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಲೋನ್ ಕೊಡಿಸುವುದಾಗಿ ವಂಚನೆ: ನಿಂದನೆಗೆ ಹೆದರಿ ಚಾಕು ಇರಿದಕೊಂಡ ವೃದ್ಧ - ಮೈಸೂರು ಲೇಟೆಸ್ಟ್ ನ್ಯೂಸ್
ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ವೃದ್ಧನೋರ್ವ ಸಾರ್ವಜನಿಕರ ನಿಂದನೆಗೆ ಹೆದರಿ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸದ್ಯ ವೃದ್ಧನನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಡಿ ಮೊಹಲ್ಲ ನಿವಾಸಿ ರಾಧಕೃಷ್ಣ (70) ಆತ್ಮಹತ್ಯೆಗೆ ಯತ್ನಿಸಿದ ವೃದ್ಧ. ಈತ ಪಿಎಂಇಜಿಪಿ (ಪ್ರೈಮ್ ಮುನಿಸ್ಟರ್ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಮ್) ಅಡಿಯಲ್ಲಿ ಲೋನ್ ಕೊಡಿಸುವಾಗಿ ಹೇಳಿ, ಮೈಸೂರಿನ ಸ್ಥಳೀಯರಲ್ಲಿ ಹಣ ಪಡೆದಿದ್ದನಂತೆ. ಲೋನ್ ಸಿಗದೆ ಇದ್ದಾಗ ಹಣ ಕೊಟ್ಟವರು ಹಣ ವಾಪಸ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಇದರಿಂದ ಹೆದರಿದ ರಾಧಕೃಷ್ಣ, ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಪಾರ್ಕ್ನಲ್ಲಿ ಎದೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಸ್ಥಳಕ್ಕಾಮಿಸಿದ ಪೊಲೀಸರು, ಚಿಕಿತ್ಸೆಗಾಗಿ ವೃದ್ಧನನ್ನು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.