ಕರ್ನಾಟಕ

karnataka

ಮೈಸೂರು ವಿವಿ ಪಿಹೆಚ್​ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಇಬ್ಬರು ಪ್ರಾಧ್ಯಾಪಕರಿಗೆ ನೋಟಿಸ್

By

Published : Aug 8, 2021, 9:32 AM IST

Updated : Aug 8, 2021, 9:45 AM IST

ಮೈಸೂರು ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಾಧ್ಯಾಪಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

Mysore research student sexual harassment case
ಲೈಂಗಿಕ ಕಿರುಕುಳ

ಮೈಸೂರು: ಸಂಶೋಧನಾ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ಆರೋಪ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸ ಗಂಗೋತ್ರಿಯ ಪ್ರಾಧ್ಯಾಪಕ ದಂಪತಿಗೆ ಕುಲಸಚಿವರು ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ:ಅತ್ಯಾಚಾರ ಆರೋಪ ಪ್ರಕರಣ, ಪ್ರಾಧ್ಯಾಪಕರಿಬ್ಬರಿಗೂ ನೋಟಿಸ್ ನೀಡಲು ಚಿಂತನೆ : ಕುಲಸಚಿವ ಆರ್. ಶಿವಪ್ಪ

ಮಾನಸ ಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಜಿ.ಟಿ. ರಾಮಚಂದ್ರಪ್ಪ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ. ಎನ್.ಕೆ. ಲೋಲಾಕ್ಷಿ ಅವರಿಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ನೋಟಿಸ್ ಕಳುಹಿಸಲಾಗಿದೆ.

ಇದನ್ನೂ ಓದಿ:ಪತಿ ವಿರುದ್ಧ ಹೋರಾಟ ಮಾಡೇ ಮಾಡ್ತೀನಿ..ಆದರೆ ಸಂಶೋಧನಾ ವಿದ್ಯಾರ್ಥಿನಿಯ ರಕ್ಷಣೆಯಾಗಬೇಕು: ಪ್ರೊ. ಲೋಲಾಕ್ಷಿ

ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಕುಲಸಚಿವ ಪ್ರೊ. ಶಿವಪ್ಪ ಅವರು ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಇಬ್ಬರು ಪ್ರಾಧ್ಯಾಪಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

Last Updated : Aug 8, 2021, 9:45 AM IST

ABOUT THE AUTHOR

...view details