ಮೈಸೂರು:ತಲಕಾಡಿನ ಅಂಗನವಾಡಿ ಕೇಂದ್ರಕ್ಕೆ ಎಂಟು ವರ್ಷದಿಂದ ವಿದ್ಯುತ್ ಪೂರೈಕೆ ಆಗದೇ ಇರುವುದರಿಂದ ಶಾಸಕ ಅಶ್ವಿನ್ಕುಮಾರ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ 8 ವರ್ಷಗಳಿಂದ ವಿದ್ಯುತ್ ಪೂರೈಕೆ ಮಾಡಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ ಸಿಡಿಪಿಒ ಬಸವರಾಜು, ಪಿಡಿಒ ಧರಣೀಶ್, ಯೋಜನಾಧಿಕಾರಿ ಮಹದೇವಯ್ಯ ಅವರನ್ನ ಶಾಸಕರು ಕ್ಲಾಸ್ ತೆಗೆದುಕೊಂಡರು.
ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಶಾಸಕ ಈ ಬಗ್ಗೆ ಪ್ರಶ್ನಿಸಿದಾಗ, ಅಧಿಕಾರಿಗಳು ತಡಬಡಾಯಿಸಿದ್ದಾರೆ.