ಕರ್ನಾಟಕ

karnataka

ETV Bharat / city

ಕೃಷಿ ಉತ್ಪನ್ನ ವಾಹನಗಳಿಗೆ ತಡೆ ಇಲ್ಲ; ಮೈಸೂರು ಡಿಸಿಪಿ‌ ಡಾ.ಪ್ರಕಾಶಗೌಡ - ಕೃಷಿ ಉತ್ಪನ್ನ ವಾಹನಗಳಿಗೆ ತಡೆ ಇಲ್ಲ; ಮೈಸೂರು ಡಿಸಿಪಿ‌ ಡಾ.ಪ್ರಕಾಶಗೌಡ

ಕೋವಿಡ್‌ ನಿರ್ಬಂಧಗಳ ಹೊರತಾಗಿಯೂ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವ ವಾಹನಗಳಿಗೆ ಯಾವುದೇ ರೀತಿಯ ತಡೆ ನೀಡುವುದಿಲ್ಲ ಎಂದು ಮೈಸೂರು ಡಿಸಿಪಿ ಡಾ.ಪ್ರಕಾಶಗೌಡ ಹೇಳಿದ್ದಾರೆ.

No restrictions to Agricultural goods vehicles : DCP Dr.Prakasha Gowda
ಕೃಷಿ ಉತ್ಪನ್ನ ವಾಹನಗಳಿಗೆ ತಡೆ ಇಲ್ಲ; ಮೈಸೂರು ಡಿಸಿಪಿ‌ ಡಾ.ಪ್ರಕಾಶಗೌಡ

By

Published : Apr 22, 2021, 3:40 AM IST

ಮೈಸೂರು:ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಹಾಗೂ ವಾರಂತ್ಯ ಕರ್ಫ್ಯೂ ಘೋಷಣೆ ಮಾಡಿರುವುದರಿಂದ ಬೆಳಗಿನ ಜಾವ ಬರುವ ಕೃಷಿ ಉತ್ಪನ್ನ ವಾಹನಗಳಿಗೆ ಅಡೆತಡೆ ಮಾಡುವುದಿಲ್ಲವೆಂದು ಡಿಸಿಪಿ ಡಾ.ಪ್ರಕಾಶಗೌಡ ಹೇಳಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ವಾಹನಗಳು ಸಂಚಾರ ಮಾಡಲು ಅವಕಾಶ ನೀಡಲಾಗಿದೆ. ತುರ್ತು ಅಗತ್ಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್ ಮಾಡಿಸಲಾಗುವುದು. ನೈಟ್ ಶಿಫ್ಟ್ ಕೆಲಸ ಮಾಡುವ ನೌಕರರು, ಪೊಲೀಸರ ತಪಾಸಣೆ ವೇಳೆ ಸಂಸ್ಥೆಯ ಗುರುತಿನ ಚೀಟಿ ತೋರಿಸಬೇಕು. ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಕೊರೊನಾ ಕಟ್ಟೆಚ್ಚರ, ನೈಟ್, ವಾರಾಂತ್ಯ ಕರ್ಫ್ಯೂ; ತಾಲ್ಲೂಕು ಆಡಳಿತದಿಂದ ಜಾಗೃತಿ

ನಗರ ವ್ಯಾಪ್ತಿ ಠಾಣಾ ಪೊಲೀಸ್ ಅಧಿಕಾರಿಗಳು ಅಲರ್ಟ್ ಆಗಿ ಕೆಲಸ ಮಾಡುವಂತೆ ಆಯಾ ಪೊಲೀಸ್ ಠಾಣಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ನಗರದ ರಿಂಗ್ ರಸ್ತೆಗಳಲ್ಲಿ ಪೊಲೀಸ್ ಪಹರೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ABOUT THE AUTHOR

...view details