ಕರ್ನಾಟಕ

karnataka

ETV Bharat / city

ಅರಮನೆ ಒಳ ಆವರಣದಲ್ಲಿ ಧಾರ್ಮಿಕ ಪೂಜೆ: ಪ್ರವಾಸಿಗರ ಪ್ರವೇಶ ನಿರ್ಬಂಧ - ಮೈಸೂರು ದಸರಾ ಅಪ್​ಡೇಟ್ಸ್​

ದಸರಾ ಉತ್ಸವ ಪ್ರಯುಕ್ತ ಅರಮನೆ ಒಳ ಆವರಣದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸುವುದರಿಂದ ಅಕ್ಟೋಬರ್ 1, 7, 14, 15, 31 ರಂದು ಅರಮನೆ ವೀಕ್ಷಣೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ

Mysore palace
ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ

By

Published : Sep 28, 2021, 6:25 AM IST

ಮೈಸೂರು: ಮೈಸೂರು ದಸರಾ-2021ರ ಪ್ರಯುಕ್ತ ರಾಜ ಮನೆತನದವರು ಅರಮನೆ ಒಳ ಆವರಣದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವುದರಿಂದ ಅಕ್ಟೋಬರ್ 1, 7, 14, 15, 31 ರಂದು ಅರಮನೆ ವೀಕ್ಷಣೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.

  • ಅ. 01ರಂದು ಶುಕ್ರವಾರ ಸಿಂಹಾಸನ ಜೋಡಣೆ ಪ್ರಯುಕ್ತ ಬೆಳಗ್ಗೆ 10 ರಿಂದ 1 ರವರೆಗೆ ಪ್ರವೇಶ ಇರುವುದಿಲ್ಲ.
  • ಅ. 07ರಂದು ಗುರುವಾರ ಖಾಸಗಿ ದರ್ಬಾರ್​ನಲ್ಲಿ ರಾಜವಂಶಸ್ಥರ ಧಾರ್ಮಿಕ ಪೂಜೆಯ ಪ್ರಯುಕ್ತ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪ್ರವೇಶ ಇರುವುದಿಲ್ಲ.
  • ಅ. 14ರಂದು ಗುರುವಾರ ಆಯುಧ ಪೂಜೆ ಪ್ರಯುಕ್ತ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಪ್ರವೇಶ ಇರುವುದಿಲ್ಲ.
  • ಅ.15ರಂದು ಶುಕ್ರವಾರ ವಿಜಯ ದಶಮಿಯ ಪ್ರಯುಕ್ತ ಸಂಪೂರ್ಣ ದಿನ ಪ್ರವೇಶವಿರುವುದಿಲ್ಲ.
  • ಅ. 31ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಸಿಂಹಾಸನ ವಿಸರ್ಜನೆ ಪ್ರಯುಕ್ತ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details