ಕರ್ನಾಟಕ

karnataka

ETV Bharat / city

ನಾಳೆ ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳಿಗೆ ನಿರ್ಬಂಧ: ಈ ನಿಯಮಗಳನ್ನು ಪಾಲಿಸಿ.. - Prime Minister Narendra Modi visits Mysore

ಜೂನ್‌ 20ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9ರವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿದ್ದಾರೆ.

No entry for devotees at  chamundi hill
ಮೋದಿ ಆಗಮನ: ನಾಳೆ ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳಿಗೆ ನಿರ್ಬಂಧ

By

Published : Jun 19, 2022, 12:11 PM IST

Updated : Jun 19, 2022, 12:17 PM IST

ಮೈಸೂರು:ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು ಜೂ.20ರಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಅಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9ರವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಕಟಣೆ ಪ್ರತಿ

ಷರತ್ತುಗಳು ಹೀಗಿವೆ:

  • ನಿಷೇಧಿತ ಅವಧಿಯಲ್ಲಿ ಮೆಟ್ಟಿಲು ಮಾರ್ಗದಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರು ಮತ್ತು ಸಾರ್ವಜನಿಕರು ಬರುವುದು ನಿಷೇಧ.
  • ಈ ಮೇಲ್ಕಂಡ ಪ್ರವೇಶ ನಿಷೇಧಿತ ಅವಧಿಯಲ್ಲಿ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ.
  • ಚಾಮುಂಡಿ ಬೆಟ್ಟದ ಗ್ರಾಮಸ್ಥರು ನಿಷೇಧಿತ ಅವಧಿಯಲ್ಲಿ ಅನಿವಾರ್ಯ ಪ್ರಸಂಗವಿದ್ದಲ್ಲಿ ಚಾಮುಂಡಿ ಬೆಟ್ಟದ ವಾಸಸ್ಥಳದ ಗುರುತಿನ ಚೀಟಿ ಬಳಸುವುದು.
  • ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು ಮತ್ತು ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ವಾಹನಗಳ ಪ್ರವೇಶ ಕಡ್ಡಾಯ ನಿಷೇಧ.

ಇದನ್ನೂ ಓದಿ:ಸೋಮವಾರ ಬೆಂಗಳೂರಿಗೆ ಮೋದಿ: ಈ ಮಾರ್ಗದಲ್ಲಿರುವ ಕಾಲೇಜುಗಳಿಗೆ ರಜೆ ಘೋಷಣೆ

Last Updated : Jun 19, 2022, 12:17 PM IST

ABOUT THE AUTHOR

...view details