ಕರ್ನಾಟಕ

karnataka

ETV Bharat / city

ಕಳೆದ ಐದು ದಿನಗಳಿಂದ ಪತ್ತೆಯಾಗದ ಕೊರೊನಾ ಪ್ರಕರಣ : ನಿಟ್ಟುಸಿರು ಬಿಟ್ಟ ಮೈಸೂರು ಜನತೆ - ಮೈಸೂರು ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಕೊರೊನಾ

ಮೈಸೂರು ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಕೊರೊನಾ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಜನತೆಗೆ ಆತಂಕ ದೂರವಾಗುತ್ತಿದೆ. ಒಟ್ಟು ಪ್ರಕರಣಗಳಲ್ಲಿ 90 ಜನ ಗುಣಮುಖರಾಗಿದ್ದು, 2 ಸಕ್ರಿಯ ಪ್ರಕರಣಗಳಿವೆ.

no corona case in mysore in five days
ಕಳೆದ ಐದು ದಿನಗಳಿಂದ ಸೋಂಕು ಪತ್ತೆಯಾಗದ ಹಿನ್ನೆಲೆ, ನಿಟ್ಟುಸಿರು ಬಿಟ್ಟ ಮೈಸೂರು ಜನತೆ

By

Published : May 27, 2020, 12:10 AM IST

ಮೈಸೂರು: ಐದು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

90 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದರು. ಆದರೆ ಮೇ 18 ರಂದು (ರೋಗಿ ಸಂಖ್ಯೆ 1225), ಮೇ 21 ರಂದು (ರೋಗಿಸಂಖ್ಯೆ 1510) ಒಟ್ಟು ಎರಡು ಪ್ರಕರಣಗಳು ಪತ್ತೆಯಾದವು.

ಕೊರೊನಾ ಬುಲೆಟಿನ್​

ಆದರೆ, ಐದು ದಿನಗಳಿಂದ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗದೇ ಇರುವುದರಿಂದ ಜನರಿಗೆ ಆತಂಕ ದೂರವಾಗುತ್ತಿದೆ. 8,298 ಮಂದಿ ಶಂಕಿತರ ಮಾದರಿ ಪರೀಕ್ಷಿಸಿದ್ದು, ಅದರಲ್ಲಿ 8,206 ನೆಗೆಟಿವ್ ವರದಿ ಬಂದಿದೆ. ಒಟ್ಟಾರೆ 92 ಪ್ರಕರಣಗಳ ಪೈಕಿ 2 ಸಕ್ರಿಯವಾಗಿದೆ.

7 ದಿನಗಳಿಂದ 252 ಮಂದಿ ಫೆಸಿಲಿಟಿ ಕ್ವಾರೆಂಟೈನ್‌ನಲ್ಲಿದ್ದಾರೆ. 159 ಮಂದಿ ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details