ಕರ್ನಾಟಕ

karnataka

ETV Bharat / city

ಚಾಮುಂಡಿ ಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ - ನಿಖಿಲ್ ಕುಮಾರಸ್ವಾಮಿ

ನನ್ನ ಹೊಸ ಚಿತ್ರಕ್ಕೆ ಅಶೀರ್ವಾದ ಪಡೆಯಲು ಬಂದಿದ್ದೇನೆ. ಜತೆಗೆ ರಾಜ್ಯದ ಜನಕ್ಕೆ ಒಳಿತು ಮಾಡಲಿ ಎಂದು ಬೇಡಿಕೊಂಡಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ- ನಿಖಿಲ್ ಕುಮಾರಸ್ವಾಮಿ

Nikhil Kumaraswamy visited Chamundi Hills
ಚಾಮುಂಡಿ ಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

By

Published : Oct 22, 2021, 2:18 PM IST

ಮೈಸೂರು: ಯುವ ಜೆಡಿಎಸ್​ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡ ಅಧಿದೇವತೆ ದರ್ಶನ ಪಡೆದರು.

ಯುವ ಜೆಡಿಎಸ್​ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹೊಸ ಚಿತ್ರಕ್ಕೆ ಅಶೀರ್ವಾದ ಪಡೆಯಲು ಬಂದಿದ್ದೇನೆ. ಜತೆಗೆ ರಾಜ್ಯದ ಜನಕ್ಕೆ ಒಳಿತು ಮಾಡಲಿ ಎಂದು ಬೇಡಿಕೊಂಡಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ ಎಂದರು. ನನ್ನ, ಹರೀಶ್ ಗೌಡರ ಸ್ನೇಹ ದೊಡ್ಡದು. ರಾಜಕೀಯದ ಹೊರತಾಗಿ ನಮ್ಮ ಸ್ನೇಹ ಇದೆ. ಸಂಘಟನೆ ವಿಚಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಮುಂದಿನ ದಿನಗಳಲ್ಲಿ ಬದಲಾವಣೆ ಆಗಲಿವೆ. ಎಲ್ಲ ಸಮಸ್ಯೆಗಳು ಸರಿ ಹೋಗುತ್ತವೆ ಎಂದರು.

ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ

ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡ ಮಾತನಾಡಿ, ನಾವು ನಿಖಿಲ್ ಸ್ನೇಹಿತರು. ಮೈಸೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಅಪ್ಪಂದಿರ ನಡುವೆ ರಾಜಕೀಯ ಶತ್ರುತ್ವ, ಮಕ್ಕಳ ನಡುವೆ ಮಿತ್ರತ್ವ ಎಂಬುವುದಕ್ಕೆ ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಜಿಟಿಡಿ ಪುತ್ರ ಹರೀಶ್ ಗೌಡರ ಸ್ನೇಹ ಮಿಲನ ಸಾಕ್ಷಿಯಾಯಿತು. ಚಾಮುಂಡಿ ಬೆಟ್ಟಕ್ಕೆ ಒಟ್ಟಿಗೆ ತೆರಳಿ ಯುವ ಮುಖಂಡರಾದ ನಿಖಿಲ್, ಹರೀಶ್ ಪೂಜೆ ಸಲ್ಲಿಸಿದರು. ಸಿ.ಎಸ್.ಪುಟ್ಟರಾಜು ಪುತ್ರ ಶಿವರಾಜ್ ಇವರಿಗೆ ಸಾಥ್ ನೀಡಿದರು.

ABOUT THE AUTHOR

...view details