ಕರ್ನಾಟಕ

karnataka

By

Published : Apr 22, 2021, 10:05 AM IST

ETV Bharat / city

ಕೋವಿಡ್​ ನಿಯಮ ಪಾಲಿಸಿ: ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು

ಮೈಸೂರಿನಲ್ಲಿ ನೈಟ್​ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಾಗಿದ್ದು, ಸುಖಾಸುಮ್ಮನೆ ಓಡಾಡೋರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಹಾಗೂ ಡಿಸಿಪಿ ಗೀತಾ ಪ್ರಸನ್ನ, ಮಾಸ್ಕ್​ ಹಾಕದೇ ದೇವರಾಜ ಮಾರುಕಟ್ಟೆಗೆ ಆಗಮಿಸಿದ ಗ್ರಾಹಕರಿಗೆ ದಂಡ ಹಾಕಿದರು.

ight curfew imposed in Mysore
ಕೋವಿಡ್​ ನಿಯಮ ಪಾಲಿಸಿ: ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು

ಮೈಸೂರು:ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಹಾಗೂ ಡಿಸಿಪಿ ಗೀತಾ ಪ್ರಸನ್ನ, ದೇವರಾಜ ಮಾರುಕಟ್ಟೆ ಹಾಗು ಸುತ್ತಮುತ್ತಲ ವಾಣಿಜ್ಯ ಪ್ರದೇಶಗಳಿಗೆ ಭೇಟಿ ನೀಡಿ, ವ್ಯಾಪಾರಿಗಳಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಿದರು. ಹಾಗೆಯೇ, ನಿನ್ನೆ ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಗರದ ಪ್ರಮುಖ ಬೀದಿಗಳಲ್ಲಿ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು

ದಿನೇದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮಾಸ್ಕ್ ಇಲ್ಲದೆ ಸಾರ್ವಜನಿಕ ಸ್ಥಳಗಳಿಗೆ ಬರಬಾರದು. ಕೊರೊನಾ ಹಾವಳಿ ತಪ್ಪಿಸಲು ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಕೆಲ ಅಂಗಡಿ ಮಾಲೀಕರು ರಾತ್ರಿ 9 ಗಂಟೆಯಾದರೂ ಅಂಗಡಿ ಮುಚ್ಚದಿರುವುದನ್ನು ಗಮನಿಸಿದ ಪೊಲೀಸರು, ಬಲವಂತವಾಗಿ ಮುಚ್ಚಿಸಿದರು.

ಇದನ್ನೂ ಓದಿ:ಒಂದೇ ವಾರದಲ್ಲಿ ಕೋವಿಡ್​ಗೆ ಬಲಿಯಾದ ಬಾಗಲಕೋಟೆಯ ದಂಪತಿ

ABOUT THE AUTHOR

...view details