ಮೈಸೂರು :ಹಿಜಾಬ್ ಮತ್ತು ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಶಾಲಾ ಪ್ರವೇಶ ನಿರಾಕರಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷೆಯಾಗಬೇಕು. ಅವರನ್ನು ಅಮಾನತು ಮಾಡಿ, ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ನ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ಆಗ್ರಹಿಸಿದರು.
ಹಿಜಾಬ್ ವಿವಾದ ನ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ಪ್ರತಿಕ್ರಿಯೆ ನೀಡಿರುವುದು.. ಇಂದು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅಯೂಬ್ ಖಾನ್, ಹಿಜಾಬ್ ಮತ್ತು ಬುರ್ಖಾವನ್ನು ಬಹಳ ಹಿಂದಿನ ಕಾಲದಿಂದಲೂ ಮುಸ್ಲಿಂ ಹೆಣ್ಣು ಮಕ್ಕಳು ಧರಿಸುತ್ತಿದ್ದಾರೆ. ಇದರಿಂದ ಯಾವುದೇ ನಷ್ಟ ಉಂಟಾಗುವುದಿಲ್ಲ.
ಆದರೆ, ಕೇಂದ್ರ ಬಿಜೆಪಿ ಸರ್ಕಾರ ತಮ್ಮ ಅಭಿವೃದ್ಧಿಯ ಲೆಕ್ಕವನ್ನು ಜನರಿಗೆ ನೀಡುವ ಸಮಯ. ಹಾಗಾಗಿ, ತಮ್ಮ ಅಭಿವೃದ್ಧಿಯ ಕೆಲಸ ಇಲ್ಲದೇ ಇರುವುದರಿಂದ ಅದನ್ನು ಮುಚ್ಚಿ ಹಾಕುವ ಸಲುವಾಗಿ ಹಿಜಾಬ್ ಮತ್ತು ಬುರ್ಖಾ ವಿವಾದ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ :ನೀವು ಹಿಜಾಬ್ಗಾಗಿ ಬರುತ್ತಿರಾ? ಎಂಬ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಸಂಸದ ಪ್ರತಾಪ್ ಸಿಂಹ ಅವರಿಗೆ ಸಂವಿಧಾನದ ಅರಿವಿಲ್ಲ.
ಅವರನ್ನ ಜನರು ಮೋದಿ ಹೆಸರಿನಲ್ಲಿ ಗೆಲ್ಲಿಸಿದ್ದಾರೆ. ಅವರು ಯಾವುದೋ ಸಂಘ ಪರಿವಾರದಿಂದ ಬಂದವರು. ಅವರ ಮಾನಸಿಕ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ, ಏನೇನೋ ಮಾತನಾಡುತ್ತಾರೆ. ಶಾಲೆಯಲ್ಲಿ ಹಿಜಾಬ್ ಮತ್ತು ಬೂರ್ಖಾ ಬಗ್ಗೆ ಪಾಠ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ಸಮವಸ್ತ್ರ ಸಂಹಿತೆ ಕಡ್ಡಾಯ ಸುತ್ತೋಲೆ : ಕ್ಯಾಂಪಸ್ ಫ್ರಂಟ್ ಹಾಗೂ ನ್ಯಾಷನಲ್ ವುಮನ್ಸ್ ಫ್ರಂಟ್ನಿಂದ ವಿರೋಧ
ಹಿಂದೂ ಧರ್ಮದ ಋಷಿ ಮುನಿಗಳು ಕಾವಿ ಬಟ್ಟೆಯನ್ನು ಮೈ ತುಂಬಾ ಹಾಕುತ್ತಾರೆ. ಅದು ಅವರ ಸಂಸ್ಕತಿ. ಸಿಖ್ಖರು ತಲೆಯ ಮೇಲೆ ಎಲ್ಲಾ ಕಡೆ, ಎಲ್ಲಾ ಸಂದರ್ಭದಲ್ಲೂ ಪೇಟವನ್ನು ಕಟ್ಟುತ್ತಾರೆ. ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳು ಬುರ್ಖಾವನ್ನು ಧರಿಸುತ್ತಾರೆ.
ಅದು ಅವರ ಸಂಸ್ಕೃತಿ. ಈ ದೇಶ ಎಲ್ಲ ಧರ್ಮದ ಜನರನ್ನು ಒಳಗೊಂಡಿರುವ ದೇಶ. ಇಲ್ಲಿ ಎಲ್ಲಾರೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡಬೇಡಿ ಎಂದು ಅಯೂಬ್ ಖಾನ್ ಸಲಹೆ ನೀಡಿದರು.