ನವದೆಹಲಿ :ಗಣರಾಜ್ಯೋತ್ಸವ ಸಮಾರಂಭದಲ್ಲಿ ದೆಹಲಿಯ ರಾಜಪಥದಲ್ಲಿ ನಡೆದ ಎನ್ಸಿಸಿಯ ಪರೇಡ್ನಲ್ಲಿ ಮೈಸೂರಿನ ಪ್ರಮೀಳಾ ಕುನ್ವರ್ ತಂಡದ ನೇತೃತ್ವ ವಹಿಸಿ ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಪ್ರಮೀಳಾ ಕುನ್ವರ್ ಅವರ ತಂದೆ ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಬಡತನದಲ್ಲಿ ಅರಳಿದ ಪ್ರತಿಭೆ ಪ್ರಮೀಳಾ ಕುನ್ವರ್ ಎನ್ಸಿಸಿಯ ಕೆಡೆಟರ್ಗಳ ಮುಂದಾಳತ್ವ ವಹಿಸಿ ಈಗ ದೇಶದ ಗಮನ ಸೆಳೆದಿದ್ದಾರೆ.