ಕರ್ನಾಟಕ

karnataka

ETV Bharat / city

ಶ್ರೀರಾಮುಲುಗೆ ಡಿಸಿಎಂ ಸ್ಥಾನ ಕೊಡಲೇಬೇಕು: ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹ - cabinet expansion

ಚುನಾವಣೆ ಸಂದರ್ಭದಲ್ಲಿ ರಾಯಚೂರಿನ ಲಿಂಗಸೂರಿನಲ್ಲಿ ಬಿಜೆಪಿ ಎಸ್​​ಟಿ ಸಮಾವೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 7.5 ಮೀಸಲಾತಿಯನ್ನು ನೀಡುತ್ತೇವೆ ಎಂದರು. ಆ ಭರವಸೆಯೂ ಈಡೇರಿಲ್ಲ, ನಾಯಕ ಜನಾಂಗಕ್ಕೆ ಅಕ್ಟೋಬರ್ 31ರೊಳಗೆ 7.5 ಮೀಸಲಾತಿ ನೀಡದಿದ್ದರೆ, ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಸ್​ಟಿ ಸಮುದಾಯದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

nayaka-welfare Forum President
ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ

By

Published : Oct 13, 2020, 5:25 PM IST

ಮೈಸೂರು: ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲೇಬೇಕು, ಇಲ್ಲದಿದ್ದರೆ ಸಿಎಂ ಯಡಿಯೂರಪ್ಪ ಮನೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಚ್ಚರಿಕೆ ರವಾನಿಸಿದ್ದಾರೆ.

ಇಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದೇವಪ್ಪ ನಾಯಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿ ಶ್ರೀರಾಮುಲು ಅವರ ಖಾತೆ ಬದಲಾವಣೆ ಮಾಡಿರುವುದು, ಅದರಲ್ಲೂ ಎರಡು ಖಾತೆಗಳನ್ನು ಕಿತ್ತುಕೊಂಡು ಒಂದು ಖಾತೆಯನ್ನು ಕೊಟ್ಟಿರುವುದು ಶ್ರೀರಾಮುಲು ಅವರಿಗೆ ಮಾಡಿದ ರಾಜಕೀಯ ಅನ್ಯಾಯ. ಜೊತೆಗೆ ಇಡೀ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ಕಿಡಿಕಾರಿದರು.

ಶ್ರೀರಾಮುಲು ಖಾತೆ ಬದಲಾವಣೆ ಕುರಿತು ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರ ಪ್ರತಿಕ್ರಿಯೆ

ಸಿಎಂ ಯಡಿಯೂರಪ್ಪ ಅವರು ಚುನಾವಣಾ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆ ಭರವಸೆಯನ್ನು ಈಡೇರಿಸಿಲ್ಲ, ಮುಂದಿನ ದಿನಗಳಲ್ಲಿ ಶ್ರೀರಾಮುಲು ಅವರನ್ನು ಡಿಸಿಎಂ ಮಾಡದೇ ಇದ್ದರೆ ಜನಾಂಗದ ಮುಖಂಡರ ಜೊತೆ ಚರ್ಚಿಸಿ ಯಡಿಯೂರಪ್ಪನವರ ಮನೆ ಮುಂದೆ ಪ್ರತಿಭಟನೆ ಮಾಡುವ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು.

ಚುನಾವಣೆ ಸಂದರ್ಭದಲ್ಲಿ ರಾಯಚೂರಿನ ಲಿಂಗಸೂರಿನಲ್ಲಿ ನಡೆದಿದ್ದ ಬಿಜೆಪಿ ಎಸ್​​ಟಿ ಸಮಾವೇಶದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಎಸ್​ಟಿ ಸಮುದಾಯಕ್ಕೆ 7.5 ಮೀಸಲಾತಿಯನ್ನು ನೀಡುತ್ತೇವೆ ಎಂದಿದ್ದರು. ಆ ಭರವಸೆಯೂ ಈಡೇರಿಲ್ಲ, ನಾಯಕ ಅಮುದಾಯಕ್ಕೆ ಅಕ್ಟೋಬರ್ 31ರೊಳಗೆ 7.5 ಮೀಸಲಾತಿ ನೀಡದಿದ್ದರೆ, ಸಮುದಾಯದ ಗುರು ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದ ದೇವಪ್ಪ ನಾಯಕ ಹೇಳಿದರು.

ABOUT THE AUTHOR

...view details