ಕರ್ನಾಟಕ

karnataka

ETV Bharat / city

ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ಹೊರ ಹಾಕಿದ ಇತಿಹಾಸ ತಜ್ಙ ನಂಜರಾಜೇ ಅರಸ್​​

ರ್‍ಯಾಪರ್ ಚಂದನ್ ಶೆಟ್ಟಿ ಅವರ 'ಕೋಲುಮಂಡೆ' ಹಾಡಿನ ಬಗ್ಗೆ ಪ್ರತಿಕ್ರಿಯಿಸಿದ ಇತಿಹಾಸ ತಜ್ಞ ನಂಜರಾಜೇ ಅರಸ್​​ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ಚಂದನ್ ಶೆಟ್ಟಿ ಹಾಡನ್ನು ಈ ರೀತಿ ಚಿತ್ರಿಸಿರುವುದು ಸರಿಯಲ್ಲ, ಕೂಡಲೇ ಈ ಹಾಡನ್ನು ಅವರು ಯೂಟ್ಯೂಬ್​​​​​ನಿಂದ ಡಿಲೀಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Chandan shetty
'ಕೋಲುಮಂಡೆ' ಹಾಡಿನ ವಿವಾದ

By

Published : Aug 25, 2020, 3:33 PM IST

ಮೈಸೂರು: ಗಣೇಶ ಹಬ್ಬದಂದು ಬಿಡುಗಡೆಯಾದ ರ್‍ಯಾಪರ್ ಚಂದನ್ ಶೆಟ್ಟಿ ಹೊಸ ಹಾಡು 'ಕೋಲುಮಂಡೆ' ವಿವಾದ ಸೃಷ್ಟಿಸಿದೆ. ಚಂದನ್ ಶೆಟ್ಟಿ ತಮ್ಮ ಲಾಭಕ್ಕಾಗಿ ಈ ಸುಂದರ ಜಾನಪದ ಗೀತೆಯನ್ನು ಕೆಟ್ಟದಾಗಿ ಚಿತ್ರಿಸುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಮೈಸೂರು, ಚಾಮರಾಜನಗರ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದನ್ ಶೆಟ್ಟಿ ವಿರುದ್ಧ ಬೇಸರ ವ್ಯಕ್ತಪಡಿಸಿದ ನಂಜರಾಜೇ ಅರಸ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಖ್ಯಾತ ಇತಿಹಾಸ ತಜ್ಞ ನಂಜರಾಜೇ ಅರಸ್​, ಚಂದನ್ ಶೆಟ್ಟಿ ಮಲೆ ಮಹದೇಶ್ವರ ದೇವರ ಈ ಹಾಡನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹದೇಶ್ವರನ ಜಾನಪದ ಹಾಡುಗಳೆಂದರೆ ಅದರಲ್ಲಿ ನಮ್ಮ ಸಂಸ್ಕೃತಿ ಇದೆ. ಈ ಹಾಡಿಗೆ ಯುವತಿಯರನ್ನು ಈ ರೀತಿ ಬಳಸಿಕೊಂಡಿರುವುದು ಸರಿಯಲ್ಲ. ಚಂದನ್ ಶೆಟ್ಟಿ ನಮ್ಮ ಭಾವನೆಗಳಿಗೆ ಈ ರೀತಿ ಧಕ್ಕೆ ಉಂಟಾಗುವಂತೆ ಮಾಡಿರುವುದು ಸೂಕ್ತವಲ್ಲ. ಆಲ್ಬಂ ಹೆಸರಿನಲ್ಲಿ ನಮ್ಮ ಸಂಸ್ಕೃತಿಯನ್ನು ಸಾಯಿಸುವ ಕೆಲಸ ಮಾಡಬಾರದು ಕೂಡಲೇ ಈ ಹಾಡನ್ನು ಯೂಟ್ಯೂಬ್​​​​ನಿಂದ ಡಿಲೀಟ್ ಮಾಡಲಿ ಎಂದು ನಂಜರಾಜೇ ಅರಸ್​ ಆಗ್ರಹಿಸಿದರು.

ನಂತರ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಜನರ ಭಾವನೆಗಳಿಗೆ ಧಕ್ಕೆಯುಂಟಾಗುವ ಕೆಲಸವನ್ನು ಯಾರೂ ಮಾಡಿದರೂ ಅದು ತಪ್ಪು. ಚಂದನ್ ಶೆಟ್ಟಿ ಮಹದೇಶ್ವರ ಜಾನಪದ ಗೀತೆಯನ್ನು ಈ ರೀತಿ ಚಿತ್ರಿಸಿರುವುದು ಸರಿಯಲ್ಲ ಎಂದು ಹೇಳಿದರು.

ABOUT THE AUTHOR

...view details