ಮೈಸೂರು :ಎರಡು ತಿಂಗಳ ಬಳಿಕ ನಂಜನಗೂಡಿನ ನಂಜುಂಡೇಶ್ವರ ಮತ್ತೆ ಕೋಟ್ಯಾಧೀಶನಾಗಿದ್ದಾನೆ. ಶುಕ್ರವಾರ ಬೆಳಗ್ಗೆಯಿಂದ ರಾತ್ರಿ 11ರವರೆಗೆ ದೇವಸ್ಥಾನದ 22 ಹುಂಡಿಗಳನ್ನು ಏಣಿಕೆ ಮಾಡಲಾಗಿದೆ. ಹುಂಡಿಯಲ್ಲಿ 2,49,07,052 ರೂ. ಕಾಣಿಕೆ ಸಂಗ್ರಹವಾಗಿದೆ.
ಅಲ್ಲದೇ, 220ಗ್ರಾಂ ಚಿನ್ನ, 6.50 ಕೆಜಿ ಬೆಳ್ಳಿ, 111 ವಿದೇಶಿ ಕರೆನ್ಸಿಗಳು ಹಾಗೂ ನಿಷೇಧಿತ 1000 ರೂ. ಮುಖಬೆಲೆಯ 12 ನೋಟುಗಳು, 500 ರೂ. ಮುಖಬೆಲೆಯ 58 ನೋಟುಗಳು ಸೇರಿದಂತೆ ಒಟ್ಟಾರೆ ನಿಷೇಧಿತ ನೋಟುಗಳಿಂದ 41,000 ರೂ.ಸಿಕ್ಕಿದೆ.