ಕರ್ನಾಟಕ

karnataka

ETV Bharat / city

ಗರ್ಭ ಧರಿಸಿದ್ದ ಹಸು ಮೇಲೆ ರೈತನ ಮುಂದೆಯೇ ಚಿರತೆ ದಾಳಿ - Mysore cheetah attack

ಚಿರತೆ ಓಡಿಸಲು ಬಂದ ರೈತನ ಮೇಲೆಯೇ ದಾಳಿ  ಮಾಡಲು ಮುಂದಾದಾಗ ಜೀವ ಉಳಿಸಿಕೊಳ್ಳಲು ರೈತ ಪರಶಿವಪ್ಪ ಓಡಿದ್ದಾರೆ. ನಂತರ ಹಸುವನ್ನು ತಿನ್ನುತ್ತಿರುವುದನ್ನು ಕಂಡು ಮತ್ತೆ ಬಂದು ಚಿರತೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Nanjanagudu gattavadi cheetah attack on cow
Nanjanagudu gattavadi cheetah attack on cow

By

Published : Apr 24, 2021, 8:04 PM IST

ಮೈಸೂರು:‌ಗರ್ಭ ಧರಿಸಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಪರಾರಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪರಶಿವಪ್ಪ ಎಂಬುವವರಿಗೆ ಸೇರಿದ ಹಸು ಮೇಲೆ ಚಿರತೆ ದಾಳಿ ಮಾಡಿದೆ‌. ಗಟ್ಟವಾಡಿ ಗ್ರಾಮದ ಕೆರೆಮಾಳ ಗದ್ದೆ ಬಯಲಿನಲ್ಲಿ ಎಂದಿನಂತೆ ಹಸು ಮೇಯಿಸುತ್ತಿದ್ದಾಗ ಪೊದೆಯಲ್ಲಿ ಅಡಗಿದ್ದ ಚಿರತೆ ದಾಳಿ ಮಾಡಿದೆ.

ಚಿರತೆ ಓಡಿಸಲು ಬಂದ ರೈತನ ಮೇಲೆಯೇ ದಾಳಿ ಮಾಡಲು ಮುಂದಾದಾಗ ಜೀವ ಉಳಿಸಿಕೊಳ್ಳಲು ರೈತ ಪರಶಿವಪ್ಪ ಓಡಿದ್ದಾರೆ. ನಂತರ ಹಸುವನ್ನು ತಿನ್ನುತ್ತಿರುವುದನ್ನು ಕಂಡು ಮತ್ತೆ ಬಂದು ಚಿರತೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿರತೆ ಹಸುವಿನ ತೊಡೆ ಭಾಗವನ್ನು ಸಂಪೂರ್ಣವಾಗಿ ತಿಂದಿದೆ. ಸದ್ಯ ಹಸು ಸಾವು ಬದುಕಿನ ನಡುವೆ ಹೋರಾಡುತ್ತಿದೆ.

ಚಿರತೆಯ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಹಸುಗಳ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡಿತ್ತು. ಚಿರತೆ ಗಟ್ಟವಾಡಿ, ಗಟ್ಟವಾಡಿಪುರ, ಹಳೇಪುರ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚಾಗಿದೆ.

ಚಿರತೆ ಸೆರೆಗೆ ಗಟ್ಟವಾಡಿ ಮತ್ತು ಗಟ್ಟವಾಡಿಪುರ ಗ್ರಾಮಗಳ ಮಧ್ಯದಲ್ಲಿ ಬೋನು ಇರಿಸಲಾಗಿದ್ದು, ಚಿರತೆ ಬೋನಿಗೆ ಬೀಳುತ್ತಿಲ್ಲ. ಚಿರತೆ ಸೆರೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಂಜನಗೂಡು ಉಪ ವಲಯ ಅರಣ್ಯಾಧಿಕಾರಿ ರಕ್ಷಿತ್ ಹೇಳಿದ್ದಾರೆ.

ABOUT THE AUTHOR

...view details