ಮೈಸೂರು :ಕಾಂಗ್ರೆಸ್‌ಗೆ ಸಮಯವಿದ್ದರೆ ರಾಜ್ಯಪಾಲರನ್ನಲ್ಲ, ರಾಷ್ಟ್ರಪತಿಗಳನ್ನೇ ಭೇಟಿಯಾಗಲಿ ಎಂದು ಮಾಧ್ಯಮದವರ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ರಾಜ್ಯಪಾಲರ ಭೇಟಿ ಬಗ್ಗೆ ವ್ಯಂಗ್ಯವಾಡಿದರು. ಇಂದು ಲಲಿತ್ ಮಹಲ್ ಹೋಟೆಲ್ನಲ್ಲಿ ಮೈಸೂರು ವಿಭಾಗೀಯ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಸಣ್ಣ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಸರ್ಕಾರ ರಚನೆ ಮಾಡಿದಾಗಿನಿಂದಲೂ ಸಿಎಂ ರಾಜೀನಾಮೆ ಕೇಳುತ್ತಾ ಬಂದಿದ್ದಾರೆ ಎಂದರು.
ಕಾಂಗ್ರೆಸ್‌ಗೆ ಸಮಯವಿದ್ದರೆ ರಾಜ್ಯಪಾಲರನ್ನಲ್ಲ ರಾಷ್ಟ್ರಪತಿಯನ್ನೇ ಭೇಟಿಯಾಗಲಿ : ಕಟೀಲ್ - ಮೈಸೂರು ವಿಭಾಗಿಯ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆ
ಸಚಿವ ಈಶ್ವರಪ್ಪ ಪ್ರಕರಣ ಸಂಪೂರ್ಣ ತನಿಖೆಯಾಗಲಿ. ಆ ಮೇಲೆ ಆರೋಪ ಸಾಬೀತಾದರೆ ಕ್ರಮಕೈಗೊಳ್ಳಲಾಗುವುದು. ಗಣಪತಿ ಕೇಸ್ನಲ್ಲಿ ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಕ್ರಮಕ್ಕೆ 7 ತಿಂಗಳಾಯಿತು. ಆದರೆ, ನಾವು ಹಾಗೆ ಮಾಡುವುದಿಲ್ಲ ಎಂದರು..
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ಸಚಿವ ಈಶ್ವರಪ್ಪ ಪ್ರಕರಣ ಸಂಪೂರ್ಣ ತನಿಖೆಯಾಗಲಿ. ಆ ಮೇಲೆ ಆರೋಪ ಸಾಬೀತಾದರೆ ಕ್ರಮಕೈಗೊಳ್ಳಲಾಗುವುದು. ಗಣಪತಿ ಕೇಸ್ನಲ್ಲಿ ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಕ್ರಮಕ್ಕೆ 7 ತಿಂಗಳಾಯಿತು. ಆದರೆ, ನಾವು ಹಾಗೆ ಮಾಡುವುದಿಲ್ಲ ಎಂದರು.
ಇದನ್ನೂ ಓದಿ:ಸಿಎಂ ಸರ್ಕಾರಿ ನಿವಾಸಕ್ಕೆ ಮುತ್ತಿಗೆ, ನಾಳೆಯಿಂದ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ
Last Updated : Apr 13, 2022, 7:06 PM IST