ಕರ್ನಾಟಕ

karnataka

ETV Bharat / city

ನಳಿನ್ ಒಬ್ಬ ನಾಲಾಯಕ್ ಬಿಜೆಪಿ ಅಧ್ಯಕ್ಷ: ಕೆಪಿಸಿಸಿ ವಕ್ತಾರ ಎಮ್.ಲಕ್ಷ್ಮಣ್ ಆರೋಪ - ನಳಿನ್ ಕುಮಾರ್ ಕಟೀಲ್ ನಲಾಯಕ್

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್​ನವರು ’’ತಲೆ ಹಿಡುಕರು’’ ಎಂದು ಹೇಳಿರುವುದು ಸರಿಯಲ್ಲ. ನಿಜವಾದ ತಲೆ ಹಿಡುಕ ನಳಿನ್ ಕುಮಾರ್ ಕಟೀಲ್, ಇವರು ಯಾರು ಯಾರಿಗೆ ತಲೆ ಹಿಡಿದು ಅಧ್ಯಕ್ಷರಾದರು ಎಂಬುದು ನಮ್ಮ ಹತ್ತಿರ ದಾಖಲೆ ಇದೆ ಎಂದು ಟಾಂಗ್​ ಕೊಟ್ಟರು.

ಎಮ್.ಲಕ್ಷ್ಮಣ್
ಎಮ್.ಲಕ್ಷ್ಮಣ್

By

Published : Apr 16, 2021, 7:33 PM IST

ಮೈಸೂರು: ನಳಿನ್ ಕುಮಾರ್ ಕಟೀಲ್‌ ಒಬ್ಬ ನಾಲಾಯಕ್ ಬಿಜೆಪಿ ರಾಜ್ಯಾಧ್ಯಕ್ಷ, ಕೂಡಲೇ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ವಕ್ತಾರ ಎಮ್.ಲಕ್ಷ್ಮಣ್ ‌ಆಗ್ರಹಿಸಿದ್ದಾರೆ.

ಈ ಟಿವಿ ಭಾರತ್ ಜೊತೆ ಮಾತನಾಡಿದ ಅವರು, ’’ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್​ನವರು ತಲೆ ಹಿಡುಕರು ಎಂದು ಹೇಳಿರುವುದು ಸರಿಯಲ್ಲ’’. ’’ನಿಜವಾದ ತಲೆ ಹಿಡುಕ ನಳಿನ್ ಕುಮಾರ್ ಕಟೀಲ್, ಇವರು ಯಾರು ಯಾರಿಗೆ ತಲೆ ಹಿಡಿದು ಅಧ್ಯಕ್ಷರಾದರು ಎಂಬುದು ನಮ್ಮ ಹತ್ತಿರ ದಾಖಲೆ ಇದೆ’’ ಎಂದು ತಿರುಗೇಟು ಕೊಟ್ಟರು. ಸರ್ಕಾರ ಬರಲು 17 ಜನರನ್ನು ಬಾಂಬೆಗೆ ಕರೆದುಕೊಂಡು ಹೋಗಿ ಏನೆಲ್ಲಾ ಮಾಡಿದರು ಎಂಬ ಮಾಹಿತಿ ನಮ್ಮ ಇದೆ. ಇವರೊಬ್ಬರು ನಾಲಾಯಕ್ ಬಿಜೆಪಿ ರಾಜ್ಯಾಧ್ಯಕ್ಷ ಕೂಡಲೇ ಕೇಂದ್ರದ ನಾಯಕರು ಇವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.

ಈ ಟಿವಿ ಭಾರತ್ ಜೊತೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಮ್.ಲಕ್ಷ್ಮಣ್

ಸಿದ್ದರಾಮಯ್ಯ ಆಡಳಿತ ಕಾಲದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದು ರಾಜ್ಯವನ್ನು ಸಾಲ‌ಗಾರರ ರಾಜ್ಯ ಮಾಡಿದ್ದರು ಎಂಬ ಸಿ.ಟಿ.ರವಿ ಆರೋಪಕ್ಕೆ ತಿರುಗೇಟು ನೀಡಿ, ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯವನ್ನು ಸಾಲಗಾರರ ರಾಜ್ಯವನ್ನಾಗಿ ಮಾಡಿದ್ದಾರೆ ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಸಿ.ಟಿ.ರವಿ ವಿರುದ್ದ ವಾಗ್ದಾಳಿ ನಡೆಸಿದರು.

ABOUT THE AUTHOR

...view details