ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿಯ ತುಪ್ಪದಕೊಳ ಬಳಿ ಕೊಳೆತ ಸ್ಥಿತಿಯಲ್ಲಿ ಹೆಣ್ಣು ಹುಲಿ ಶವ ಪತ್ತೆಯಾಗಿದೆ.
ನಾಗರಹೊಳೆ: ಕೊಳೆತ ಸ್ಥಿತಿಯಲ್ಲಿ ಹೆಣ್ಣು ಹುಲಿ ಶವ ಪತ್ತೆ - ಹುಲಿಗಳ ಕಾದಾಟದಲ್ಲಿ ಸಾವನ್ನಪ್ಪಿದರಬಹುದೆಂದು ಶಂಕಿಸ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹೆಣ್ಣು ಹುಲಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹುಲಿಗಳ ಕಾದಾಟದಲ್ಲಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ನಾಗರಹೊಳೆ: ಕೊಳೆತ ಸ್ಥಿತಿಯಲ್ಲಿ ಹೆಣ್ಣು ಹುಲಿ ಶವ ಪತ್ತೆ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಬಳಿಯ ತುಪ್ಪದಕೊಳ ಎಂಬಲ್ಲಿ 7 ವರ್ಷದ ಹೆಣ್ಣು ಹುಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಹದ್ದುಗಳ ಹಾರಾಟ ಗಮನಿಸಿ ಸ್ಥಳಕ್ಕೆ ಬಂದು ನೋಡಿದಾಗ ಕೊಳೆತ ಸ್ಥಿತಿಯಲ್ಲಿದ್ದ ಹುಲಿ ಶವ ಕಂಡುಬಂದಿದೆ.
ಹುಲಿಯ ಮೇಲೆ ಗಾಯದ ಗುರುತುಗಳಿದ್ದು, ಅದರ ಒಂದು ಹಲ್ಲು ಬಿದ್ದಿದೆ. ಹುಲಿಗಳ ಕಾದಾಟದಲ್ಲಿ ಸಾವನ್ನಪ್ಪಿರ ಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ಸ್ಥಳದಲ್ಲೇ ಹುಲಿ ಶವ ಸುಟ್ಟಿದ್ದಾರೆ.