ಮೈಸೂರು: ಮೂರು ಪಕ್ಷಗಳಲ್ಲೂ ಭ್ರಷ್ಟಾಚಾರಿಗಳಿದ್ದು, ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕುತ್ತಾರೆ. ಮೂರು ಪಕ್ಷದವರು ಲೋಕಾಯುಕ್ತಕ್ಕೆ ವಿರೋಧಿಯಾಗಿದ್ದಾರೆ. ಚುನಾವಣೆಯ ಕಾರಣದಿಂದ ಗಿಮಿಕ್ ಮಾಡುತ್ತಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಒಂದು ವೇಳೆ ಸುಪ್ರೀಂ ಕೋರ್ಟ್ ಮೊರೆ ಹೋದರೆ ಅಧಿಕಾರ ಕಳೆದುಕೊಳ್ಳುವ ಭಯ ಇದೆ. ಚುನಾವಣೆ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ನೇರವಾಗಿ ಅಪೀಲು ಹೋಗುತ್ತಿಲ್ಲ. ಹಿಂಬಾಲಕರು ಹಿಂಬಾಗಿಲ ಮೂಲಕ ಕೋರ್ಟ್ ಮೊರೆ ಹೋಗಬಹುದು. ಅದಕ್ಕೆ ಅವಕಾಶ ಇದೆ. ಸದ್ಯಕ್ಕೆ ಚುನಾವಣೆ ಇರುವ ಕಾರಣ ಗೌಣವಾಗಿದ್ದಾರೆ ಎಂದರು.
ಮೂರು ಪಕ್ಷದವರು ಲೋಕಾಯುಕ್ತಕ್ಕೆ ವಿರೋಧಿಯಾಗಿದ್ದಾರೆ ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾವಿರರು ಕೋಟಿ ನಷ್ಠ ಉಂಟಾಗಿದೆ. ಆದರೆ 40% ಕಮಿಷನ್ ಆಸೆಗಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಸೈಲೆಂಟ್ ಆಗಿದ್ದಾರೆ. ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕುತ್ತಾರೆ. ಭ್ರಷ್ಟರಿಗೆ, ಭ್ರಷ್ಟಾಚಾರಿಗೆ ಜೈಕಾರ ಹಾಕುತ್ತಾರೆ. ಏರ್ಪೋರ್ಟ್ ಹೊರಗೆ ಹೋಗಿ ಸ್ವಾಗತ ಕೋರುತ್ತಾರೆ. ಸದ್ಯ ಜನರ ಮನಃ ಸ್ಥಿತಿ ಹಣ, ಅಧಿಕಾರದ ಹಿಂದೆ ಸಾಗಿದೆ. ಅದಕ್ಕಾಗಿ ಹಂಬಲಿಸುತ್ತಾರೆ ಹಾತೊರೆಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದೆ. ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ. ಮೂರು ಪಕ್ಷದಲ್ಲೂ ಕೂಡ ಈ ತೀರ್ಪು ವಿರೋಧಿಸಬಹುದು. ಕಾರಣ ಲೋಕಾಯುಕ್ತ ಇದ್ದ ವೇಳೆ ಸಾಕಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು. ಎಸಿಬಿ ಬಂದ ಬಳಿಕ ಯಾವೊಬ್ಬ ರಾಜಕಾರಣಿ, ಅಧಿಕಾರಿಯ ಮೇಲೂ ಕ್ರಮ ಜರುಗಿಸರಲಿಲ್ಲ. ಲೋಕಾಯುಕ್ತಕ್ಕೆ ಸ್ವತಂತ್ರವಾದ ಅಧಿಕಾರ ಹಾಗೂ ಸವಲತ್ತುಗಳನ್ನು ನೀಡಬೇಕು. ಈ ಮೂಲಕ ಲೋಕಾಯುಕ್ತ ಬಲ ಪಡಿಸಬೇಕು ಎಂದರು.
ಇದನ್ನೂ ಓದಿ :ಎಸಿಬಿ ಜಾರಿಗೆ ತಂದಿದ್ದ ಕಾಂಗ್ರೆಸ್ಗೆ ಹಿನ್ನಡೆ: ಸಚಿವ ಆರ್.ಅಶೋಕ್