ಮೈಸೂರು/ಬೆಂಗಳೂರು: ದೃಷ್ಟಿ ವಿಶೇಷ ಚೇತನೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮದ ಕುಡಕೂಡಿನ ತಾಂಡವ ಮೂರ್ತಿ ಮತ್ತು ನವನೀತ ದಂಪತಿಯ ಪುತ್ರಿ ಕೆ.ಟಿ. ಮೇಘನಾ ಯುಪಿಎಸ್ಸಿಯಲ್ಲಿ 425 ನೇ ರ್‍ಯಾಂಕ್ ಗಳಿಸಿದ್ದಾರೆ.
2020ರಲ್ಲೂ ಯುಪಿಎಸ್ಸಿಯಲ್ಲಿ 465 ನೇ ರ್‍ಯಾಂಕ್ ಪಡೆದಿದ್ದ ಮೇಘನಾ ಮತ್ತೆ 2021ರಲ್ಲಿ ಪರೀಕ್ಷೆ ಬರೆದು 425ನೇ ರ್‍ಯಾಂಕ್ ಪಡೆದಿದ್ದಾರೆ. 2015 ರಲ್ಲಿ ಕೆಎಎಸ್ನಲ್ಲಿ 11 ನೇ ರ್‍ಯಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಖಜಾನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ. 10ನೇ ತರಗತಿಯಲ್ಲಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ 70 ರಷ್ಟು ದೃಷ್ಟಿ ಕಳೆದುಕೊಂಡಿದ್ದ ಮೇಘನಾ ಅವರು ಈ ಸಮಸ್ಯೆ ಮೆಟ್ಟಿನಿಂತು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.
ಇದನ್ನೂ ಓದಿ:ಆರು ವರ್ಷಗಳ ನಿರಂತರ ಶ್ರಮ; UPSC ಸಾಧನೆ ಕುರಿತು ಸಂತಸ ಹಂಚಿಕೊಂಡ ಬೆಳಗಾವಿಯ ಸಾಹಿತ್ಯ