ಮೈಸೂರು: ಟಿವಿಎಸ್ ಎಕ್ಸ್ ಎಲ್ ಮೊಪೆಡ್ ಅಂದ್ರೆ, ಕಳ್ಳನಿಗೆ ಎಲ್ಲಿಲ್ಲದ ಅಕ್ಕರೆಯಂತೆ. ಅದಕ್ಕಾಗಿ ಆತ ಬರೋಬ್ಬರಿ 29 ಬೈಕ್ ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ಬೈಕ್ಗಳ ಸಮೇತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6.25 ಲಕ್ಷ ರೂಪಾಯಿ ಬೆಲೆಬಾಳುವ 29 ಟಿವಿಎಸ್ ಎಕ್ಸ್ ಎಲ್ ಸೂಪರ್ ಮೊಪೆಡ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದ ಸಿದ್ಧರಾಜು ಅಲಿಯಾಸ್ ಹೊರೆಯಾಲ ಸಿದ್ಧ ಬಂಧಿತ ಆರೋಪಿಯಾಗಿದ್ದಾನೆ. ಈ ಆರೋಪಿಯು ಜಮೀನಿಗೆ ತೆರಳುವ ರೈತರ ಟಿವಿಎಸ್ ಮೊಪೆಡ್ಗಳನ್ನ ನಕಲಿ ಕೀ ಬಳಸಿ ಕಳ್ಳತನ ಮಾಡಿ ಪುಡಿಗಾಸಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗ್ತಿದೆ.
ಟಿವಿಎಸ್ ಎಕ್ಸ್ ಎಲ್ ಮೊಪೆಡ್ ಅಂದ್ರೆ ಇಷ್ಟ, ಅದಕ್ಕೆ 29 ಬೈಕ್ ಕದ್ದು ಸಿಕ್ಕಿಬಿದ್ದ ಖದೀಮ ಜೂನ್ 2 ರಂದು ನಗರದ ಬೈಪಾಸ್ ರಸ್ತೆಯ ಹೆಜ್ಜಿಗೆ ಸೇತುವೆಯ ಬಳಿ ವಾಹನ ತಪಾಸಣೆ ನಡೆಸುವಾಗ ಆರೋಪಿ ಸಿದ್ಧರಾಜು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ನಂಜನಗೂಡು ಪಟ್ಟಣ ವ್ಯಾಪ್ತಿಯಲ್ಲಿ 2, ಚಾಮರಾಜನಗರ ಟೌನ್ ನಲ್ಲಿ 2 ,ಗುಂಡ್ಲುಪೇಟೆ ಟೌನ್ ನಲ್ಲಿ 25 ಟಿವಿಎಸ್ ಮೊಪೆಡ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ದಿನೇ ದಿನೇ ಹೆಚ್ಚಾಗುತ್ತಿದ್ದ ಮೊಪೆಡ್ ಕಳ್ಳತನ ಪ್ರಕರಣವನ್ನು ಭೇದಿಸಲು ಎಸ್ ಪಿ ಚೇತನ್ ಅವರ ಆದೇಶದಂತೆ ವೃತ್ತನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ತಂಡ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದೆ. ತಂಡಕ್ಕೆ ಎಸ್ಪಿ ಚೇತನ್ 5000 ರೂ. ಬಹುಮಾನವನ್ನು ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಗ್ರಾಹಕರೇ ಎಚ್ಚರ..! ಕಡಬದಲ್ಲಿ ಓಡಾಡುತ್ತಿದೆ 100 ರೂ. ಜೆರಾಕ್ಸ್ ನೋಟು