ಮೈಸೂರು: ಭಾರಿ ಗಾಳಿ ಮಳೆಯಿಂದ ಮರದ ಕೊಂಬೆ ಬಿದ್ದು ಹೋರಿ ಸಾವನ್ನಪ್ಪಿ, ರೈತ ಪ್ರಾಣಾಪಾಯದಿಂದ ಪಾರಾದ ಘಟನೆ ಎಚ್.ಡಿ.ಕೋಟೆ ನಡೆದಿದೆ. ಹೈರಿಗೆ ಗ್ರಾಮದ ಜವರಯ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾದರೆ, ಜವರಯ್ಯನವರಿಗೆ ಸೇರಿದ ಹೋರಿ ಸ್ಥಳದಲ್ಲಿಯೇ ಮೃತಪಟ್ಟಿದೆ.
ಮೈಸೂರು: ಮಳೆ-ಗಾಳಿಗೆ ಕೊಂಬೆ ಮುರಿದು ಬಿದ್ದು ಹೋರಿ ಸಾವು, ಅಪಾಯದಿಂದ ರೈತ ಪಾರು - Mysuru Carriage ox dies after falling off a tree in a wind rain
ಭಾರಿ ಗಾಳಿ ಮಳೆಯಿಂದ ಮರದ ಕೊಂಬೆ ಬಿದ್ದು ಹೋರಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆಯಲ್ಲಿ ನಡೆದಿದೆ.
ಮೈಸೂರು: ಗಾಳಿ ಮಳೆಗೆ ಕೊಂಬೆ ಮುರಿದು ಬಿದ್ದು ಹಸು ಸಾವು
ಜಮೀನಿನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ, ಭಾರಿ ಮಳೆ ಗಾಳಿಯಿಂದ ಮರದ ಕೊಂಬೆ ಮುರಿದ ಬಿದ್ದಿದೆ. ಪರಿಣಾಮ ಗಾಡಿ ಎಳೆದು ಹೋಗುತ್ತಿದ್ದ ಹೋರಿ ಸ್ಥಳದಲ್ಲೇ ಮೃತಪಟ್ಟಿದೆ. ಮತ್ತೊಂದು ಹೋರಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದೆ. ಜವರಯ್ಯ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಗದಗದಲ್ಲಿ ಮದುವೆಗೆ ಹೋಗಿದ್ದ ಟ್ರ್ಯಾಕ್ಟರ್ ಪಲ್ಟಿ: ಇಬ್ಬರು ಸಾವು, ಹಲವರಿಗೆ ಗಾಯ