ಮೈಸೂರು:ಅಕಾಲಿಕ ಮಳೆಗೆ ಜಿಲ್ಲೆಯ ರೈತರೊಬ್ಬರು ಬಲಿಯಾಗಿದ್ದಾರೆ. ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದ ಸಿದ್ದಲಿಂಗ ನಾಯಕ (72) ಸಿಡಿಲು ಬಡಿದು ಇಂದು ಮೃತಪಟ್ಟಿದ್ದಾರೆ.
ಜಮೀನಿನ ಕೆಲಸ ಮುಗಿಸಿಕೊಂಡು ರೈತ ಮನೆಗೆ ತೆರಳುವಾಗ ಮಳೆ ಆರಂಭವಾಗಿದೆ. ಬಳಿಕ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.