ಕರ್ನಾಟಕ

karnataka

ETV Bharat / city

ಮಾ.22ರಂದು ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ

ಮಾ.22ರಂದು ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ ನಡೆಯಲಿದ್ದು, 28,581 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.

Mysore university convocation program
ಮೈ.ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

By

Published : Mar 13, 2022, 7:44 PM IST

ಮೈಸೂರು: ಮಾ.22ರಂದು ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ ನಡೆಯಲಿದೆ ಎಂದು ಮೈ.ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಕ್ರಾಫರ್ಡ್‌ ಹಾಲ್​ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿ ಒಟ್ಟು 28,581 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 18,567 (ಶೇ. 64.96)ರಷ್ಟು ವಿದ್ಯಾರ್ಥಿನಿಯರು ಇರುವುದು ವಿಶೇಷ. 10,014 (ಶೇ.35.03) ವಿದ್ಯಾರ್ಥಿಗಳಿದ್ದಾರೆ.

ಮೈ.ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ವಿವಿಧ ವಿಷಯಗಳಲ್ಲಿ 157 ಅಭ್ಯರ್ಥಿಗಳಿಗೆ ಪಿಹೆಚ್​ಡಿ ಪದವಿಯನ್ನು ಪ್ರದಾನ ಮಾಡಲಾಗುವುದು. ಒಟ್ಟು 376 ಪದಕಗಳು, 214 ನಗದು ಬಹುಮನಗಳನ್ನು 213 ಅಭ್ಯರ್ಥಿಗಳು ಪಡೆದುಕೊಳ್ಳಲಿದ್ದಾರೆ. 5,677 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 22,747 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಿಎ ನಲ್ಲಿ ತೇಜಸ್ವಿನಿ ವಿ 9 ಚಿನ್ನದ ಪದಕ ಹಾಗೂ 10 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಎಂಎ ಕನ್ನಡ ವಿಷಯದಲ್ಲಿ ಮಹದೇವಸ್ವಾಮಿಗೆ 14 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಲಭಿಸಿದೆ. ಅಮೃತ ಎಸ್.ಆರ್. ಅವರಿಗೆ ಬಿಕಾಂನಲ್ಲಿ 3 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಬಂದಿದೆ.

ಇದನ್ನೂ ಓದಿ:ಉಂಡ ಮನೆಗೆ ಕನ್ನ ಆರೋಪ.. ಕೈ ಮುಖಂಡನ ಮನೆ ಗುಡಿಸಿ ಗುಂಡಾಂತರ ಮಾಡಿ ನೇಪಾಳಿ ದಂಪತಿ ಎಸ್ಕೇಪ್​

ಎಂಕಾಂನಲ್ಲಿ ಸುಮನಾ ಕೆ ಅವರಿಗೆ 4 ಚಿನ್ನದ ಪದಕ ಹಾಗೂ 3 ಕ್ಯಾಶ್ ಪ್ರೈಜ್ ಸಿಕ್ಕಿದೆ. ಬಿಇಡಿಯಲ್ಲಿ ಕಾವ್ಯಶ್ರೀ 2 ಮೆಡಲ್, 2 ಕ್ಯಾಶ್ ಪ್ರೈಜ್ ಪಡೆದುಕೊಂಡಿದ್ದಾರೆ. ಎಂಎಡ್‌ನಲ್ಲಿ ಧನ್‌ರಾಜ್ 5 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ಕುಲಪತಿಗಳ ಸಮ್ಮೇಳನ: ಮಾ.23, 24, 25ರಂದು ಅಂದರೆ ಮೂರು ದಿನ ಮೈಸೂರಿನಲ್ಲಿ ಆಲ್ ಇಂಡಿಯಾ ವೈಸ್ ಚಾನ್ಸಲರ್ ಕಾನ್ಫರೆನ್ಸ್ ನಡೆಯಲಿದೆ. ದೇಶದ 150 ಕುಲಪತಿಗಳು ಆಫ್ ಲೈನ್ ಹಾಗೂ 200 ಮಂದಿ ಆನ್‌ಲೈನ್ ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ABOUT THE AUTHOR

...view details