ಮೈಸೂರು: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಎಚ್ಚೆತ್ತ ಮೈಸೂರು ವಿಶ್ವವಿದ್ಯಾನಿಲಯವು ವಿವಿಗೆ ಪ್ರವೇಶ ಬಯಸುವ ವಿದೇಶಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದೆ.
ಕೊರೊನಾ ಕುರಿತು ಹೇಮಂತ್ ಕುಮಾರ್ ಪ್ರತಿಕ್ರಿಯೆ ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ವಿವಿಗೆ ವಿದೇಶಿ ವಿದ್ಯಾರ್ಥಿಗಳು ಬಂದಿಲ್ಲ, ವಿದ್ಯಾರ್ಥಿಗಳು ಬಂದರೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುವುದು. ಜನವರಿ 2 ರಿಂದ ಸ್ನಾತಕೋತ್ತರ ಪ್ರವೇಶ ಪ್ರಾರಂಭಿಸಲಾಗುವುದು ಎಂದರು.
ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ನಡೆಯುತ್ತಿವೆ. ಆಫ್ ಲೈನ್ ತರಗತಿಗೆ ಶೇ 30 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇನ್ನುಳಿದಂತೆ ಆನ್ಲೈನ್ ಕ್ಲಾಸ್ಗಳು ಸಹ ನಡೆಯುತ್ತವೆ ಎಂದು ಅವರು ಹೇಳಿದರು.
ಅಂತಿಮ ವರ್ಷದ ಪದವಿ ಬಿಟ್ಟು ಇನ್ನುಳಿದ ಪದವಿ ತರಗತಿಗಳ ಆರಂಭಕ್ಕೆ ಸರ್ಕಾರದಿಂದ ಗೈಡ್ಲೈನ್ಸ್ ಬರಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮೈಸೂರು ವಿವಿಗೆ ಎರಡು ತಂಡದಿಂದ ವರದಿ ಸಲ್ಲಿಕೆಯಾಗಲಿದೆ ಎಂದರು.
ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರವೇ ಕನ್ನಡಕ್ಕೆ ಅನುವಾದಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಶಿಕ್ಷಣ ನೀತಿಯ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅಧ್ಯಯನ ಪೀಠ ತೆರೆಯಲು ಚಿಂತಿಸಲಾಗುವುದು ಎಂದು ಹೇಳಿದರು.