ಮೈಸೂರು: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಅನಗತ್ಯ ಓಡಾಡುವವರ ಮೇಲೆ ಕಣ್ಣಿಡಲು ಪೊಲೀಸರು ಡ್ರೋನ್ ಮೂಲಕ ನಿಗಾ ಇಟ್ಟಿದ್ದಾರೆ.
ಸಾಂಸ್ಕೃತಿಕ ನಗರಿ ಮೇಲೆ ಪೊಲೀಸರ 'ಹದ್ದಿನ ಕಣ್ಣು': ಗುಂಪು ಸೇರುವವರ ವಿರುದ್ಧ ದೂರು
ಕೊರೊನಾ ಮಹಾಮಾರಿಯ ಸಂಪೂರ್ಣ ನಾಶಕ್ಕೆ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಮೈಸೂರು ಜಿಲ್ಲಾ ಪೊಲೀಸ್
ಉದಯಗಿರಿ ಠಾಣಾ ವ್ಯಾಪ್ತಿಯ ಮಹದೇವಪುರ ಮುಖ್ಯರಸ್ತೆಯ ವೈ.ಎಸ್.ಟ್ರೇಡರ್ಸ್ ದಿನಸಿ ಅಂಗಡಿ ಬಳಿ ಸುಮಾರು 10 ಜನರು ಗುಂಪುಗೂಡಿದ್ದರು. ಇದನ್ನು ಡ್ರೋನ್ ಕ್ಯಾಮೆರಾ ಪತ್ತೆ ಮಾಡಿದೆ. ಇದೇ ರಸ್ತೆಯ ದೀಪಕ್ ಪಾನ್ ಬ್ರೋಕರ್ಸ್ ಬಳಿಯ ದಿನಸಿ ಅಂಗಡಿ ಎದುರು ಸುಮಾರು 8 ಜನರು ಗುಂಪುಗೂಡಿದ್ದರು.
ಲಾಕ್ ಡೌನ್ ಮತ್ತು ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ನಿರ್ಲಕ್ಷ್ಯತೆಯಿಂದ ಗುಂಪು ಸೇರಿದ ಹಿನ್ನೆಲೆಯಲ್ಲಿ ಈ ಎರಡು ಗುಂಪುಗಳ ವಿರುದ್ಧ ಉದಯಗಿರಿ ಠಾಣಾ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪತ್ತೆ ಕಾರ್ಯ ಕೈಗೊಂಡಿದ್ದಾರೆ.