ಕರ್ನಾಟಕ

karnataka

ETV Bharat / city

ಜನರ ಸೇವೆಗೆ ಮೈಸೂರು ಪೊಲೀಸರು ಸನ್ನದ್ಧರಾಗಿದ್ದಾರೆ..ಯಾವುದೇ ಆತಂಕ ಬೇಡ: ಕೆ.ಟಿ.ಬಾಲಕೃಷ್ಣ - mysore dasara news

ಈ ಬಾರಿ ಮೈಸೂರು ದಸರಾಗೆ ಆರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು,ಜನರ ಸೇವೆಗೆ ಮೈಸೂರು ಪೊಲೀಸರು ಸನ್ನದ್ಧರಾಗಿದ್ದಾರೆ. ಯಾವುದೇ ಆತಂಕ ಬೇಡ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ

By

Published : Oct 7, 2019, 7:39 AM IST

ಮೈಸೂರು:ಈ ಬಾರಿ ಮೈಸೂರು ದಸರಾಗೆ ಆರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು,ಜನರ ಸೇವೆಗೆ ಮೈಸೂರು ಪೊಲೀಸರು ಸನ್ನದ್ಧರಾಗಿದ್ದಾರೆ. ಯಾವುದೇ ಆತಂಕ ಬೇಡ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ

ಈ ಬಗ್ಗೆ ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ಜೊತೆಯಲ್ಲಿ ಕೆಎಸ್​ಆರ್​ಪಿ ಸೇರಿದಂತೆ ವಿವಿಧ ತುಕಡಿಗಳು ಬಂದೋಬಸ್ತ್ ಕಾರ್ಯನಿರ್ವಹಿಸಲಿವೆ. ಅಧಿಕಾರಿಗಳ ಸಭೆ ನಡೆಸಿ,ಜಂಬೂಸವಾರಿ ಮಾರ್ಗದ ಬಂದೋಬಸ್ತ್​ಗೆ ಚರ್ಚೆ ಮಾಡಲಾಗಿದೆ. ಸಾರ್ವಜನಿಕರ ಜೊತೆ ಸಂಯಮದಿಂದ ನಡೆದುಕೊಳ್ಳುವಂತೆ ತಿಳಿಸಲಾಗಿದೆ. ಅರಮನೆ ಸೇರಿದಂತೆ ಜಂಬೂಸವಾರಿ ಮಾರ್ಗದಲ್ಲಿ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ಸೋಮವಾರ ಮತ್ತು ಮಂಗಳವಾರದ ಕಾರ್ಯಕ್ರಮಕ್ಕೆ ಸನ್ನದ್ಧರಾಗಿದ್ದೇವೆ. ಇದುವರೆಗೂ ಸಾಕಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಿರುವ ನಮ್ಮ ಪೊಲೀಸರು ಮುಂದೆಯೂ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಇನ್ನು,ಉಗ್ರರ ಕರಿನೆರಳು ವಿಚಾರವಾಗಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ವಿಚಾರಕ್ಕೆ ಸಂಬಂಧಿಸಿದಂತೆ ಯಾರನ್ನ ಬಂಧಿಸಿರುವುದಿಲ್ಲ. ಇಂತಹ ಘಟನೆಯೇ ನಡೆದಿಲ್ಲ. ಯಾವುದೇ ಮಾಹಿತಿ ಸಿಕ್ಕರೆ ಮೊದಲು ಸ್ಪಷ್ಟೀಕರಣ ಪಡೆಯಿರಿ. ಜನರ ಸುರಕ್ಷತೆಗಾಗಿ ಎಲ್ಲಾ ಜಾಗಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಇದು ಜನರ ಹಬ್ಬವಾಗಿದ್ದು,ಯಾವುದೇ ಆತಂಕ ಜನರಲ್ಲಿ ಬೇಕಿಲ್ಲ. ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದ್ದು ಯಾವುದೇ ಊಹಾಪೋಹಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದರು.

ವಿಜಯದಶಮಿ ದಿನ ಮಧ್ಯಾಹ್ನ 2 ಗಂಟೆಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 4.15ರ ಸಮಯಕ್ಕೆ ಪುಷ್ಪಾರ್ಚನೆ ಆಗಲಿದೆ. ತದನಂತರ 4 ಕಿ.ಮೀ. ಮೆರವಣಿಗೆ ನಡೆಯಲಿದೆ. ಸಂಜೆ 7 ರಿಂದ 9 ಗಂಟೆವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ. ಅರಮನೆಯೊಳಗೆ 23 ರಿಂದ 24 ಸಾವಿರ ಜನ ಸೇರುತ್ತಾರೆ. ಬನ್ನಿಮಂಟಪದಲ್ಲಿ 30 ಸಾವಿರ ಜನ ಕೂರಲು ಅವಕಾಶ ಇರಲಿದೆ. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಗತ್ಯ ಮುಂಜಾಗ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ನಮ್ಮ ಸಿಬ್ಬಂದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಕುರಿತು ಈಗಾಗಲೇ ಸ್ಥಳ ನಿಯೋಜನೆ ಮಾಡಲಾಗಿದೆ ಎಂದರು.

ABOUT THE AUTHOR

...view details