ಕರ್ನಾಟಕ

karnataka

ETV Bharat / city

₹ 8 ಲಕ್ಷ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿದ ಬಸ್​ ಚಾಲಕ.. ಡ್ರೈವರ್​ ಪ್ರಾಮಾಣಿಕತೆಗೆ ಸೆಲ್ಯೂಟ್​, ಸನ್ಮಾನ - ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಬಸ್ ಚಾಲಕ

ಬ್ಯಾಗ್​​ನಲ್ಲಿ ಇಟ್ಟಿದ್ದ ಸುಮಾರು 8 ಲಕ್ಷ ರೂ.ಮೌಲ್ಯದ ಚಿನ್ನ ವಾಪಸ್ ಸಿಗುವುದಿಲ್ಲ ಎಂದು ಭಾವಿಸಿದ್ದ ವ್ಯಕ್ತಿಗೆ, ಕಳೆದು ಹೋದ ಚಿನ್ನ ಸಿಕ್ಕಿರುವುದು ಸಂಭ್ರಮ ಮೂಡಿಸಿದೆ. ಈತನ ಈ ಖುಷಿಗೆ ಓರ್ವ ಪ್ರಾಮಾಣಿಕ ಚಾಲಕ ಕಾರಣರಾಗಿದ್ದಾರೆ. ಸಾಂಸ್ಕೃತಿಕ ನಗರಿ ಈ ಘಟನೆಗೆ ಸಾಕ್ಷಿಯಾಗಿದೆ.

Driver Returns Bag jewellery To owner
ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಬಸ್ ಚಾಲಕ

By

Published : Dec 5, 2021, 5:40 PM IST

ಮೈಸೂರು:ಸಾರಿಗೆ ಬಸ್​​ನಲ್ಲಿ ಪ್ರಯಾಣಿಕನೋರ್ವ ಮರೆತು ಬಿಟ್ಟೋಗಿದ್ದ ಬ್ಯಾಗ್‌ನಲ್ಲಿ ಚಿನ್ನದ ಅಭರಣ ಇದ್ದರೂ ಸಾರಿಗೆ ಬಸ್‌ ಚಾಲಕ ಅದನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಇಂದು ನಗರದಲ್ಲಿ ನಡೆದಿದೆ.

ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಬಸ್ ಚಾಲಕ

ಬ್ಯಾಗ್​​ನಲ್ಲಿಟ್ಟಿದ್ದ ಸುಮಾರು 8 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಾಪಸ್ ಸಿಗುವುದಿಲ್ಲ ಎಂದು ಭಾವಿಸಿದ್ದ ವ್ಯಕ್ತಿಗೆ, ಕಳೆದು ಹೋದ ಚಿನ್ನ ಸಿಕ್ಕಿರುವುದು ಸಂಭ್ರಮಕ್ಕೆ ಕಾರಣವಾಗಿದೆ. ಮಂಜುನಾಥ್ ಹಾಗು ಶ್ಯಾಮಸುಂದರಪ್ಪ ಅವರು ದಾವಣಗೆರೆಯಿಂದ ಮೈಸೂರಿಗೆ ಬಂದು, ಕೆಲಸ ಮುಗಿಸಿಕೊಂಡು ವಾಪಸ್ ದಾವಣಗೆರೆಗೆ ಹೋಗುತ್ತಿದ್ದರು. ಈ ವೇಳೆ ಮೈಸೂರು ಸಾರಿಗೆ ಬಸ್​​ನಲ್ಲಿ 8 ಲಕ್ಷ ರೂ‌.ಮೌಲ್ಯದ ಚಿನ್ನವಿದ್ದ ಬ್ಯಾಗ್​​ನ್ನು ಬೀಳಿಸಿಕೊಂಡಿದ್ದರು.

ಚಿನ್ನವಿದ್ದ ಬ್ಯಾಗ್ ಕಳೆದುಕೊಂಡು ಆತಂಕಗೊಂಡಿದ್ದ ಮಂಜುನಾಥ್ ಅವರು, ಕೂಡಲೇ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ನಂಜನಗೂಡು ಗ್ರಾಮಾಂತರ ಬಸ್ ನಿಲ್ದಾಣದ ಅಧಿಕಾರಿಗಳಿಗೆ ನಡೆದ ವೃತ್ತಾಂತ ಹೇಳಿದ್ದಾರೆ.

ಸಾರಿಗೆ ಅಧಿಕಾರಿಗಳು ಮಂಜುನಾಥ್ ಅವರು ಪ್ರಯಾಣಿಸಿದ ಬಸ್ ಸಮಯ ತಿಳಿದುಕೊಂಡು ಆ ವೇಳೆ ಕರ್ತವ್ಯದಲ್ಲಿದ್ದ ಚಾಲಕ ಈರಯ್ಯ ಅವರನ್ನು ಕೇಳಿದಾಗ, ಬ್ಯಾಗ್ ಸಿಕ್ಕಿದೆ ಎಂದು ಹೇಳಿದ್ದಾರೆ. ಕೂಡಲೇ ಪೊಲೀಸರು ಈರಯ್ಯ ಅವರನ್ನು ಬಸ್ ಡಿಪೋಗೆ ಕರೆಸಿ, ನ್ಯಾಯಾಧೀಶರ ಸಮ್ಮುಖದಲ್ಲಿ ಚಿನ್ನವಿದ್ದ ಬ್ಯಾಗ್​​ನ್ನು ಮಂಜುನಾಥ್ ಅವರಿಗೆ ವಾಪಸ್ ನೀಡಿದ್ದಾರೆ. ಚಾಲಕ ಈರಯ್ಯ ಅವರ ಪ್ರಾಮಾಣಿಕತೆಯನ್ನ ಪ್ರಶಂಸಿ, ನ್ಯಾಯಾಧೀಶರು ಹಾಗು ಪೊಲೀಸರು ಸನ್ಮಾನಿಸಿದರು.

ಇದನ್ನೂ ಓದಿ:ಮೀಸೆ ಚಿಗುರದ ಹುಡುಗರಿಂದ ಗಾಂಜಾ ಮತ್ತಲ್ಲಿ ಹಣಕ್ಕಾಗಿ ಕ್ರೈಂ : 6 ಬಾಲಕರು ವಶಕ್ಕೆ

ABOUT THE AUTHOR

...view details