ಮೈಸೂರು :ನಗರದ ಸರ್ಕಾರಿ ಕೆ ಆರ್ ಆಸ್ಪತ್ರೆಯ ಕೋವಿಡ್ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ವೈದ್ಯರ ಮೇಲೆ ಹಲ್ಲೆಯಾಗುತ್ತಿದೆ. ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಕಿರಿಯ ವೈದ್ಯರು ಪ್ರತಿಭಟಿಸಿದರು.
ಕಳೆದ ಶನಿವಾರ 23 ವರ್ಷದ ವ್ಯಕ್ತಿಯೊಬ್ಬ ಕೋವಿಡ್‌ನಿಂದ ಸಾವನ್ನಪ್ಪಿದ್ದ. ಅವರ ಸಂಬಂಧಿಕರು ಮೃತ ವ್ಯಕ್ತಿಯನ್ನು ನೋಡಲು ಬಿಡಲಿಲ್ಲ ಎಂದು ಐಸಿಯು ವಿಭಾಗದ ಬಾಗಿಲು ಮುರಿದು, ಕಲ್ಲು ತೂರಾಟ ನಡೆಸಿ ವೈದ್ಯರ ಮೇಲೆ ಹಲ್ಲೆಗೆ ಮುಂದಾಗಿದ್ದರು.