ಕರ್ನಾಟಕ

karnataka

ETV Bharat / city

ದೇಶಾದ್ಯಂತ ನಾಳೆ ಲಾರಿ ಮುಷ್ಕರ: ಮೈಸೂರಿನಲ್ಲೂ ಬೆಂಬಲ - ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

ಕೇಂದ್ರ ಸರ್ಕಾರದ ಸಾರಿಗೆ ಉದ್ಯಮ ವಿರೋಧಿ ನೀತಿ ಹಾಗೂ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಾಳೆ ದೇಶಾದ್ಯಂತ ಲಾರಿ ಮುಷ್ಕರ ಹಮ್ಮಿಕೊಂಡಿದ್ದು, ಇದಕ್ಕೆ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಬೆಂಬಲ ಸೂಚಿಸಿದೆ.

ಲಾರಿ ಮುಷ್ಕರಕ್ಕೆ ಮೈಸೂರಿನಲ್ಲೂ ಬೆಂಬಲ
ಲಾರಿ ಮುಷ್ಕರಕ್ಕೆ ಮೈಸೂರಿನಲ್ಲೂ ಬೆಂಬಲ

By

Published : Feb 25, 2021, 1:51 PM IST

ಮೈಸೂರು: ಉದ್ಯಮ ವಿರೋಧಿ ನೀತಿ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ನಾಳೆ ಲಾರಿ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಬೆಂಬಲ ಸೂಚಿಸಿದೆ.

ಲಾರಿ ಮುಷ್ಕರಕ್ಕೆ ಮೈಸೂರಿನಲ್ಲೂ ಬೆಂಬಲ

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮ, ದೇಶಾದ್ಯಂತ ನಾಳೆ ನಡೆಯಲಿರುವ ಲಾರಿ ಮುಷ್ಕರಕ್ಕೆ ಮೈಸೂರು ಜಿಲ್ಲೆಯ ವಿವಿಧ ಲಾರಿ ಮಾಲೀಕರ ಸಂಘ ಬೆಂಬಲ ಸೂಚಿಸಿದೆ. ನಾಳೆ ಸರಕು, ಸಾಗಾಣಿಕೆ ಸಂಪೂರ್ಣ ಬಂದ್ ಆಗಲಿದೆ. ಪೆಟ್ರೋಲ್, ಡೀಸೆಲ್, ವಿಮೆ ಟೋಲ್ ದರ ಇಳಿಕೆ ಮಾಡಬೇಕು. ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.

ಮೈಸೂರು ರೈಲ್ವೆ ಗೂಡ್ಸ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಮಾತನಾಡಿ, ಹಾಲು, ಔಷಧ, ತರಕಾರಿ ಸಾಗಿಸುವ ಲಾರಿಗಳಿಗೆ ವಿನಾಯತಿ ನೀಡಲಾಗಿದೆ. ಇನ್ನುಳಿದ ಲಾರಿಗಳು ಸಂಚಾರ ಮಾಡುವುದಿಲ್ಲ ಎಂದು ಹೇಳಿದರು.

ABOUT THE AUTHOR

...view details