ಕರ್ನಾಟಕ

karnataka

ETV Bharat / city

3ನೇ ಅಲೆ ಬಗ್ಗೆ ಮಕ್ಕಳ ಪೋಷಕರು ಆತಂಕ ಪಡಬೇಕಿಲ್ಲ; ಮೈಸೂರು ಆರೋಗ್ಯಾಧಿಕಾರಿ - ಡಾ.ಕೆ.ಹೆಚ್. ಪ್ರಸಾದ್

2ನೇ ಅಲೆಯಲ್ಲಿ 19 ಸಾವಿರ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ 10 ವರ್ಷದ ಒಳಗಿನ ಶೇ 3.6 ರಷ್ಟು ಮಕ್ಕಳಲ್ಲಿ ಸೋಂಕು ಧೃಡವಾಗಿದೆ. ಅಂದರೆ 700 ಮಕ್ಕಳಲ್ಲಿ ಈ ಸೋಂಕು ಧೃಡವಾಗಿದ್ದು, 9 ಜನ ಮಾತ್ರ ಸಾವನ್ನಪ್ಪಿದ್ದಾರೆ. ಅದರಲ್ಲಿ ಬೇರೆ ಬೇರೆ ಅನಾರೋಗ್ಯದ ಸಮಸ್ಯೆಗಳಿರುವುದರಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು DHO ತಿಳಿಸಿದ್ದಾರೆ.

mysore dho talk prasadh
ಮೈಸೂರು DHO

By

Published : Jun 23, 2021, 9:45 PM IST

ಮೈಸೂರು: ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಸುದ್ದಿಗಳಿದ್ದು, ಇದು ಸರಿಯಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ.

ಓದಿ: 'ಡಿ ಬಾಸ್' ಒಂದು ಮನವಿಯಿಂದ ಮೃಗಾಲಯಗಳಿಗೆ ಹರಿದು ಬಂದ ಹಣ ₹____ ಕೋಟಿ

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂಬ ವರದಿಗಳು ಬರುತ್ತಿವೆ. ಇವು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದ್ದು, ಇದು ಸರಿಯಲ್ಲ. 2020ರ ಕೋವಿಡ್ ಮೊದಲ ಅಲೆಯೇ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿದ್ದು, ಒಟ್ಟು ಮೈಸೂರು ಜಿಲ್ಲೆಯಲ್ಲಿ 1.63 ಲಕ್ಷ ಸೋಂಕಿತರು ಇದ್ದಾರೆ. ಅದರಲ್ಲಿ 10 ವರ್ಷದ ಒಳಗಿನ ಮಕ್ಕಳಿಗೆ ಶೇ 2 ರಿಂದ 3 ರಷ್ಟು ಮಾತ್ರ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

2ನೇ ಅಲೆಯಲ್ಲಿ 19 ಸಾವಿರ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ 10 ವರ್ಷದ ಒಳಗಿನ ಶೇ 3.6 ರಷ್ಟು ಮಕ್ಕಳಲ್ಲಿ ಸೋಂಕು ಧೃಡವಾಗಿದೆ. ಅಂದರೆ 700 ಮಕ್ಕಳಲ್ಲಿ ಈ ಸೋಂಕು ದೃಢವಾಗಿದ್ದು, 9 ಜನ ಮಾತ್ರ ಸಾವನ್ನಪ್ಪಿದ್ದಾರೆ. ಅದರಲ್ಲಿ ಬೇರೆ ಬೇರೆ ಅನಾರೋಗ್ಯದ ಸಮಸ್ಯೆಗಳಿರುವುದರಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು DHO ವಿವರಿಸಿದ್ದಾರೆ.

ಕೊರೊನಾ 3 ನೇ ಅಲೆ ಮಕ್ಕಳಿಗೆ ಬಾಧಿಸುತ್ತದೆ ಎಂಬುದು ಸತ್ಯವೋ ಅಥವಾ ಸುಳ್ಳೊ ಈಗ ಹೇಳಲಾಗದು. ಆದರೆ ಮಕ್ಕಳ ಪೋಷಕರು ಇದರಿಂದ ಆತಂಕಕ್ಕೆ ಒಳಗಾಗಬಾರದು. ಕೋವಿಡ್ 3ನೇ ಅಲೆ ಬಂದರೂ ಅದನ್ನು ಎದುರಿಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ‌.

ABOUT THE AUTHOR

...view details