ಮೈಸೂರು :ಜನ ಸಹಕಾರ ನೀಡುತ್ತಿರುವುದರಿಂದ ಅನ್ಲಾಕ್ ಮಾಡುವ ವಾತಾವರಣ ನಿರ್ಮಾಣವಾಗುತ್ತಿದೆ. ಅಲ್ಲದೇ ಲಾಕ್ಡೌನ್ ಮುಂದುವರಿಕೆಯಿಂದ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.
ಓದಿ: ದೂರವಾಣಿ ಮೂಲಕ ಜಮೀರ್ ಅಹ್ಮದ್ಗೆ ಸುರ್ಜೇವಾಲಾ ಕ್ಲಾಸ್.. ಅಷ್ಟೇ ಖಡಕ್ ಪ್ರತ್ಯುತ್ತರ ಕೊಟ್ಟ ಮಾಜಿ ಸಚಿವರು
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಕಳೆದ ಹತ್ತು ದಿನಗಳಿಂದ ಟೆಸ್ಟಿಂಗ್ ಹೆಚ್ಚಳ ಮಾಡಲಾಗಿದೆ. ಅತಿ ಹೆಚ್ಚು ಟೆಸ್ಟಿಂಗ್ ನಡೆದಿರುವುದರಿಂದ ಪಾಸಿಟಿವಿಟಿ ರೇಟ್ ಶೇ.9 ರಷ್ಟಿದೆ. ಜುಲೈ 5ರೊಳಗೆ ಪಾಸಿಟಿವಿಟಿ ರೇಟ್ ಕಡಿಮೆಯಾಗಲಿದೆ. ಅಲ್ಲದೇ ಸೋಮವಾರ (ಜೂ 21) ಒಂದೇ ದಿನ 40 ಸಾವಿರ ವ್ಯಾಕ್ಸಿನ್ ನೀಡಲಾಗಿದೆ ಎಂದರು.
ಕೊರೊನಾ ಕುರಿತಂತೆ ಡಿಸಿ ಬಗಾದಿ ಗೌತಮ್ ಮಾಹಿತಿ.. ಕೊರೊನಾ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಎಲ್ಲಾ ತಾಲೂಕು ಅಧಿಕಾರಿಗಳಿಗೂ ಈ ಬಗ್ಗೆ ನಿರ್ದೇಶನ ನೀಡಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಚಿವರು ಹಾಗೂ ಜನಪ್ರತಿನಿಧಿಗಳು ಸಭೆ ಮಾಡಿ ಸಲಹೆ ನೀಡಿದ್ದಾರೆ.