ಕರ್ನಾಟಕ

karnataka

ದಸರಾ ಯುವ ಸಂಭ್ರಮ: ವಿದ್ಯಾರ್ಥಿಗಳ ನೃತ್ಯದ ಮೋಡಿಗೆ ತಲೆದೂಗಿದ ಮಾನಸ‌ಗಂಗೋತ್ರಿ

By

Published : Sep 26, 2019, 10:49 AM IST

ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ದಸರಾ ಯುವ ಸಂಭ್ರಮದ 9ನೇ ದಿನ‌ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ತಂಡಗಳು ಪ್ರದರ್ಶಿಸಿದ ನೃತ್ಯ ಎಲ್ಲರ ಮನಗೆದ್ದಿತು.

ದಸರಾ ಯುವ ಸಂಭ್ರಮ

ಮೈಸೂರು: ದೇಶಭಕ್ತಿ ಸಾರುವ ಹಾಡುಗಳು, ರೈತನ ಬದುಕು ಕಟ್ಟಿಕೊಡುವ ಗೀತೆಗಳು, ಹೀಗೆ ಸಂಗೀತ ನೃತ್ಯದ ಮೋಡಿಗೆ ಮಾನಸ‌ಗಂಗೋತ್ರಿ ತಲೆದೂಗಿತು.

ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ಸಂಭ್ರಮದ 9ನೇ ದಿನ‌ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ತಂಡಗಳು ಪ್ರದರ್ಶಿಸಿದ ನೃತ್ಯವು ಎಲ್ಲರ ಮನಗೆದ್ದಿತು. ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ‘ದೇವ ಶ್ರೀ ಗಣೇಶ’ ಎಂದು ಭಕ್ತಿ ಪ್ರದರ್ಶಿಸಿದರೆ, ಹೆಚ್.ಡಿ.ಕೋಟೆ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ‘ಓಂ ಶಕ್ತಿ, ಜಯ ಶಕ್ತಿ’ ಗೀತೆಗೆ ಹೆಜ್ಜೆ ಹಾಕಿ ಚಾಮುಂಡಿ ಅವತಾರವನ್ನು ತೋರಿಸಿದರು.

ದಸರಾ ಯುವ ಸಂಭ್ರಮ

ಮಂಡ್ಯದ ಕಾಳೇನಹಳ್ಳಿ ಅನಿಕೇತನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡ ‘ಹಿಂದೂಸ್ಥಾನ ಗೊತ್ತೇನೊ?’ ಎಂಬ ಗೀತೆಗೆ ನೃತ್ಯದ ಮೂಲಕ ಪುಲ್ವಾಮಾ ದಾಳಿಯ ಪ್ರತೀಕಾರವಾದ ಸರ್ಜಿಕಲ್ ಸ್ಟ್ರೈಕ್​ ಹಾಗೂ ವೀರಯೋಧರ ಸಾಹಸವನ್ನು ಅನಾವರಣಗೊಳಿಸಿದರು.

ತಿ.ನರಸೀಪುರ ತಾಲೂಕಿನ ಮೆಣಸೀಕ್ಯಾತನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ತಂಡ ‘ಕನ್ನಡ ನಾಡಿನ ಜೀವನದಿ ಈ ಕಾವೇರಿ’, ‘ಹೇ ರುಕ್ಕಮ್ಮ, ನಮ್ಮ ಊರೆ ಊರಮ್ಮ’ ಹಾಗೂ ಇತರ ಗೀತೆಗಳಿಗೆ ಕುಣಿದು, ಹುಲಿವೇಷ, ವೀರಗಾಸೆ, ಕೋಲಾಟ ನೃತ್ಯ ಪ್ರದರ್ಶಿಸಿ ನೆರೆದಿದ್ದವರನ್ನು ರಂಜಿಸಿದರು.

ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಜಯ ಶ್ರೀ ಗಣೇಶ ಗೀತೆಯೊಂದಿಗೆ ಸರ್ವಧರ್ಮ ಸಮನ್ವಯತೆ, ದೇಶ ಭಾವೈಕ್ಯತೆಯನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿತು. ಪಿರಿಯಾಪಟ್ಟಣದ ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ತಂಡ ‘ಶಿವತಾಂಡವಂ’ ನೃತ್ಯ, ಮಂಡ್ಯ ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜು ತಂಡದ ಶಿವಾರಾಧನೆ ನೃತ್ಯ, ಮೈಸೂರಿನ ಕ್ರೈಸ್ತ ಪ್ರಥಮ ದರ್ಜೆ ಕಾಲೇಜು ತಂಡದ ಭಾವೈಕ್ಯತೆ ನೃತ್ಯ, ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜು ತಂಡ ‘ಜೈಹೋ’ ನೃತ್ಯಗಳು ಮನಮೋಹಕಗೊಳಿಸಿದವು.

ABOUT THE AUTHOR

...view details