ಮೈಸೂರು:ಈ ವರ್ಷದ ನಾಡಹಬ್ಬದಲ್ಲಿ ಭಾಗವಹಿಸುವ ಮೊದಲ ಹಂತದ ಗಜಪಡೆಗೆ ವೀರನ ಹೊಸಹಳ್ಳಿಯ ದ್ವಾರದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಅದ್ದೂರಿ ನಾಡಹಬ್ಬದಲ್ಲಿ ಭಾಗವಹಿಸುವ ಮೊದಲ ಹಂತದ ಅಭಿಮನ್ಯು ನೇತೃತ್ವದ 9 ಆನೆಗಳ ತಂಡಕ್ಕೆ ಗಣ್ಯರು ಶುಭಲಗ್ನ 9.01 ರಿಂದ 9.35ರ ಒಳಗೆ ಪುಷ್ಪಾರ್ಚನೆ ಮಾಡಿ ಪ್ರಾರಂಭಿಕ ಚಾಲನೆ ಕೊಟ್ಟರು.
ಮೈಸೂರು ದಸರಾ: ಗಜ ಪಯಣಕ್ಕೆ ಸಂಭ್ರಮದ ಚಾಲನೆ - ಮೈಸೂರು
ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ಗಜಪಯಣಕ್ಕೆ ಇಂದು ಚಾಲನೆ ಸಿಕ್ಕಿದೆ.
ಗಜ ಪಯಣ
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಪುಷ್ಪಾರ್ಚನೆಗೂ ಮುನ್ನ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಶೃಂಗರಿಸಲಾಗಿತ್ತು. ಅರ್ಚಕರು ಪೂಜೆ ಸಲ್ಲಿಸಿದ ನಂತರ ಲಾರಿಯ ಮೂಲಕ ಮೈಸೂರಿನ ಅರಣ್ಯ ಭವನಕ್ಕೆ ಕಳುಹಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ನಗಾರಿ, ಚಂಡಿ ಮೇಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.