ಮೈಸೂರು: ಅರಣ್ಯ ಸಂಚಾರಿ ದಳದ ಕಾನ್ಸ್ಟೇಬಲ್ ಹಾಗೂ ನಂಜನಗೂಡು ತಾಲೂಕಿನ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕ ವೈರಸ್ಗೆ ಬಲಿಯಾಗಿದ್ದಾರೆ.
ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೈಸೂರು ಅರಣ್ಯ ಸಂಚಾರ ದಳದ 49 ವರ್ಷದ ಕಾನ್ಸ್ಟೇಬಲ್ ಶನಿವಾರ ರಾತ್ರಿ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಮೃತ ಕಾನ್ಸ್ಟೇಬಲ್ ಈ ಹಿಂದೆ ಮೈಸೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.