ಕರ್ನಾಟಕ

karnataka

ETV Bharat / city

ಏರುತ್ತಿದೆ ಕೊರೊನಾ ಗುಣಮುಖರ ಸಂಖ್ಯೆ... ಸಕ್ರಿಯ ಪ್ರಕರಣಗಳ‌ ಸಂಖ್ಯೆ ಇಳಿಕೆ!

ಇಂದು ಮೈಸೂರು ಜಿಲ್ಲೆಯಲ್ಲಿ 308 ಕೊರೋನಾ ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1,352 ಮಂದಿ ಡಿಸ್ಚಾರ್ಜ್ ಹಾಗೂ 4 ಜನ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 80 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 126 ಜನರು ಗುಣಮುಖರಾಗಿದ್ದಾರೆ. ಇಂದು ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

corona
corona

By

Published : Oct 22, 2020, 8:40 PM IST

ಮೈಸೂರು/ಚಿಕ್ಕಮಗಳೂರು: ಕೊರೊನಾದಿಂದ ಗುಣಮುಖರಾಗಿ ಡಿಸ್ಚಾಜ್೯ ಆಗುವವರ ಸಂಖ್ಯೆ ಏರುತ್ತಿದ್ದರೆ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಗೆ ತುಸು ನೆಮ್ಮದಿ ತಂದಿದೆ.

ಮೈಸೂರಿನಲ್ಲಿಂದು 308 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 46,172ಕ್ಕೇರಿದೆ.

ಮೈಸೂರು ಕೊರೊನಾ ಅಂಕಿ ಅಂಶ

ಜಿಲ್ಲೆಯಲ್ಲಿಂದು ಒಂದೇ ದಿನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,352 ಆಗಿದ್ದು, ಆ ಮೂಲಕ ಡಿಸ್ಚಾರ್ಜ್ ಜಾಸ್ತಿಯಾಗುತ್ತಿದ್ದು, ಒಟ್ಟು 41,238 ಮಂದಿ ಗುಣಮುಖರಾದಂತಾಗಿದೆ. ಇನ್ನು ಜಿಲ್ಲೆಯಲ್ಲಿ 3,998 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 4 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್-19ನಿಂದ ಈವರೆಗೆ 936 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆಯೂ ಸಹ ಕಡಿಮೆಯಾಗುತ್ತಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 80 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ, 11,839ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲಾ ಕೋವಿಡ್ -19 ಆಸ್ಪತ್ರೆಯಿಂದ 126 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 10,792 ಜನ ಸೋಂಕಿತರು ಜಿಲ್ಲಾ ಕೋವೀಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣ ಮುಖರಾಗಿ ಬಿಡುಗಡೆಯಾದಂತೆ ಆಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆ

ಚಿಕ್ಕಮಗಳೂರು ತಾಲೂಕಿನಲ್ಲಿ 33, ಕಡೂರು ತಾಲೂಕಿನಲ್ಲಿ 14, ಮೂಡಿಗೆರೆ ತಾಲೂಕಿನಲ್ಲಿ 02, ತರೀಕೆರೆ ತಾಲೂಕಿನಲ್ಲಿ 18, ಶೃಂಗೇರಿ ತಾಲೂಕಿನಲ್ಲಿ 05, ಕೊಪ್ಪ ತಾಲೂಕಿನಲ್ಲಿ 05, ಎನ್ಆರ್ ಪುರ ತಾಲೂಕಿನಲ್ಲಿ 03 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.

ಇಂದು ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 136ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ ಮನೆಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್​ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,839 ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 785 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details