ಮೈಸೂರು:ಮತದಾನದ ಸಂದರ್ಭದಲ್ಲಿ ಎಡಗೈ ತೋರು ಬೆರಳಿಗೆ ಹಾಕಲಾಗುವಶಾಯಿಯ ಬಗ್ಗೆ ಎದ್ದಿರುವ ಊಹಾಪೋಹದ ಮಾತುಗಳನ್ನು ನಂಬಬೇಡಿ. ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಕಂಪನಿ ಗುಣಮಟ್ಟದ ವಿಚಾರದಲ್ಲಿ ಎಲ್ಲಿಯೂ ಹೊಂದಾಣಿಕೆ ಮಾಡುವುದಿಲ್ಲ ಎಂದು ಮಾಜಿ ಅಧ್ಯಕ್ಷ ಎಚ್.ಎಸ್. ವೆಂಕಟೇಶ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಶಾಯಿಯ ಬಗ್ಗೆ ಎದ್ದಿರುವ ಅನುಮಾನಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ನಮ್ಮ ಕಂಪೆನಿ ದೇಶಕ್ಕೆ ಪ್ರಜಾಪ್ರಭುತ್ವ ಬಂದಾಗಿನಿಂದಲೂ ಚುನಾವಣಾಗಳಿಗೆ ಅಳಿಸಲಾಗದ ಶಾಯಿಯನ್ನು ಪೂರೈಸುತ್ತಿದೆ. ಇದಲ್ಲದೆ ವಿದೇಶಗಳಲ್ಲಿ ನಡೆಯುವ ಎಲೆಕ್ಷನ್‌ಗಳಿಗೂ ಉತ್ತಮ ಗುಣಮಟ್ಟದ ಶಾಯಿಯನ್ನೇ ಸರಬರಾಜು ಮಾಡುತ್ತಿದೆ ಎಂದರು.