ETV Bharat Karnataka

ಕರ್ನಾಟಕ

karnataka

ETV Bharat / city

ಬಿಗ್‌ ಬಜಾರ್‌ಗೆ ದಂಡ ವಿಧಿಸಿದ ಮೈಸೂರು ಮಹಾನಗರ ಪಾಲಿಕೆ - ಬಿಗ್‌ ಬಜಾರ್‌ಗೆ ದಂಡ ವಿಧಿಸಿದ ಮೈಸೂರು ಮಹಾನಗರ ಪಾಲಿಕೆ

ಬಿಗ್‌ ಬಜಾರ್‌ ಅಕ್ಕಪಕ್ಕದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳು ಬಿದ್ದಿದ್ದ ಕಾರಣ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್. ಜೆಎಲ್‌ಬಿ ರಸ್ತೆಯಲ್ಲಿರುವ ಬಿಗ್‌ ಬಜಾರ್‌ಗೆ 7 ಸಾವಿರ ರೂ ದಂಡ ವಿಧಿಸಿದ್ದಾರೆ.

Fine to Big Bazar
ಬಿಗ್‌ ಬಜಾರ್‌ಗೆ ದಂಡ ವಿಧಿಸಿದ ಮೈಸೂರು ಮಹಾನಗರ ಪಾಲಿಕೆ
author img

By

Published : Dec 18, 2019, 5:29 AM IST

ಮೈಸೂರು:ರಸ್ತೆಯ ಅಕ್ಕಪಕ್ಕ ಹಾಗೂ ಮರದ ಸುತ್ತಲೂ ಕಸ ಇದ್ದ ಹಿನ್ನೆಲೆಯಲ್ಲಿ ಬಿಗ್‌ ಬಜಾರ್‌ಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ.

ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಬಿಗ್‌ ಬಜಾರ್‌ಗೆ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಭೇಟಿ ನೀಡಿದಾಗ ಬಿಗ್‌ ಬಜಾರ್‌ ಅಕ್ಕಪಕ್ಕದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳು ಬಿದ್ದಿದ್ದು, ಅಶುಚಿತ್ವ ಕಂಡುಬಂದಿದೆ. ಹೀಗಾಗಿ ಸ್ಥಳದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಲು 5 ಸಾವಿರ ರೂ ಮತ್ತು ತ್ಯಾಜ್ಯವನ್ನು ಬೇರ್ಪಡಿಸದಿದ್ದಕ್ಕಾಗಿ 2 ಸಾವಿರ ರೂ. ಸೇರಿ ಒಟ್ಟು 7 ಸಾವಿರ ರೂ ದಂಡ ವಿಧಿಸಿದ್ದಾರೆ.

ಅಲ್ಲದೇ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ಕೂಡ ನೀಡಲಾಗಿದೆ.

ABOUT THE AUTHOR

author-img

...view details