ಮೈಸೂರು: 1 ವರ್ಷ 11 ತಿಂಗಳ ಮಗುವೊಂದು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ನೂರಾರು ವಸ್ತುಗಳನ್ನು ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಸಾಧಕರ ಪಟ್ಟಿ ಸೇರಿದೆ. ಮೈಸೂರು ತಾಲೂಕಿನ ಬನ್ನೂರಿನ ಬಿ ಆರ್ ಗಿರೀಶ್ ಮತ್ತು ಗಗನ ದಂಪತಿ ಪುತ್ರ ವೈಭವ್ ಈ ಸಾಧನೆ ಮಾಡಿರುವ ಪುಟಾಣಿ.
ದೇಹದ 20 ಭಾಗಗಳು, 7 ಹಬ್ಬಗಳು, 15 ವಾಹನಗಳು, 35 ಪ್ರಾಣಿಗಳು, 9 ಹಣ್ಣುಗಳು, 19 ತಿಂಡಿಗಳು, 9 ರೀತಿಯ ಉಡುಪುಗಳು, 4 ರಾಷ್ಟ್ರೀಯ ಚಿಹ್ನೆಗಳು, ವರ್ಣ ಮಾಲೆ ಆಧಾರಿತ 72 ವಸ್ತುಗಳನ್ನು ಗುರುತಿಸುವ ಜೊತೆಗೆ ನಾನಾ ರೀತಿಯ ಯೋಗ ಭಂಗಿಗಳನ್ನು ಮಾಡುವ ಕಲೆಯನ್ನು ಮಗು ಕರಗತ ಮಾಡಿಕೊಂಡಿದೆ.
ಮಗುವಿನ ಈ ಎಲ್ಲಾ ವಿಡಿಯೋಗಳನ್ನು ಪೋಷಕರು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಕಳುಹಿಸಿದ್ದಾರೆ. ಅದನ್ನು ಪರಿಶೀಲಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ತಂಡ ತನ್ನ ಅಧಿಕೃತ ವೆಬ್ ಸೈಟ್ನಲ್ಲಿ ಪುಟಾಣಿ ವೈಭವ್ ಹೆಸರನ್ನು ಪ್ರಕಟಿಸಿದೆ. ಪೋಸ್ಟ್ ಮೂಲಕ ಪ್ರಮಾಣ ಪತ್ರವನ್ನು ಪೋಷಕರಿಗೆ ಕಳುಹಿಸಿದ್ದಾರೆ.