ಮೈಸೂರು: ಸಾಂಸ್ಕೃತಿಕ ನಗರಿಯ ಕಲಾವಿದರೊಬ್ಬರು ರಾಯಲ್ ಛಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ಚಿತ್ರವನ್ನು ಗೋಡೆ ಮೇಲೆ ಬಿಡಿಸಿದ್ದು ಪ್ರಶಂಸೆಗೆ ಕಾರಣವಾಗಿದೆ.
ಗ್ರಾಫಿಕ್ ಪೇಂಟಿಂಗ್ನಲ್ಲಿ ಮೂಡಿದ ಆರ್ಸಿಬಿ ಪ್ಲೇಯರ್ಸ್: ಮೈಸೂರು ಕಲಾವಿದನ ಕೈಚಳಕಕ್ಕೆ ಅಭಿಮಾನಿಗಳು ಫಿದಾ - mysore artist badal nanjundaswamy
ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ರೆಸಾರ್ಟ್ ಒಂದರ ಗೋಡೆಯ ಮೇಲೆ ಆರ್.ಸಿ.ಬಿ ತಂಡದ ಪ್ಲೇಯರ್ಸ್ಗಳಾದ ಎಬಿ ಡಿವಿಲಿಯರ್ಸ್, ಯದುವೇಂದ್ರ ಚಹಲ್, ನವ್ ದೀಪ್ ಸೈನಿ ಹಾಗೂ ಪಡಿಕಲ್ ಅವರ ಭಾವಚಿತ್ರವನ್ನು ಬಿಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ರೆಸಾರ್ಟ್ನ ಗೋಡೆಯ ಮೇಲೆ ಆರ್.ಸಿ.ಬಿ ತಂಡದ ಪ್ಲೇಯರ್ಸ್ಗಳಾದ ಎಬಿ ಡಿವಿಲಿಯರ್ಸ್, ಯದುವೇಂದ್ರ ಚಹಲ್, ನವ್ ದೀಪ್ ಸೈನಿ ಹಾಗೂ ಪಡಿಕಲ್ ಅವರ ಭಾವಚಿತ್ರವನ್ನು ಗ್ರಾಫಿಕ್ ಆರ್ಟ್ ನಿಂದ ಬಿಡಿಸಿದ್ದಾರೆ. ಬಾದಲ್ ನಂಜುಂಡಸ್ವಾಮಿ ತಮ್ಮ ಕಲಾಕೃತಿಯ ಚಿತ್ರವನ್ನು ತಮ್ಮ ಟ್ಟಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಹಂಚಿಕೊಂಡಿರುವ ಯಜುವೇಂದ್ರ ಚಹಲ್ ಹಾರ್ಟ್ ಸಿಂಬಲ್ ಎಮೋಜಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಆರ್.ಸಿ.ಬಿ ಪ್ಲೇಯರ್ಸ್ ಜೊತೆಗೆ ಮತ್ತೊಂದು ಗೋಡೆಯ ಮೇಲೆ ಐಪಿಎಲ್ನಲ್ಲಿ ಮಿಂಚುತ್ತಿರುವ ಕನ್ನಡಿಗ ಆಟಗಾರರಾದ ಕೆ.ಎಲ್.ರಾಹುಲ್, ಕರುಣ್ ನಾಯರ್, ಮನೀಶ್ ಪಾಂಡೆ, ಮಾಯಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್ ಅವರ ಚಿತ್ರವನ್ನು ಸಹ ಬಿಡಿಸಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.