ಕರ್ನಾಟಕ

karnataka

ETV Bharat / city

ಯೋಗೇಶ್ವರ್ ಹೇಳಿಕೆ ಕೊಟ್ಟ ಮೇಲೆ ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ‌ ಗೊಂದಲ ಇದೆ: ಸಂಸದ ಶ್ರೀನಿವಾಸ್ ಪ್ರಸಾದ್ - ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ

ದೆಹಲಿಗೆ ಹೋಗಿ ವಿಜಯೇಂದ್ರ, ಯೋಗೇಶ್ವರ್ ಬಗ್ಗೆ ದೂರು ಕೊಟ್ಟಿದ್ದಾರೆ. ಅದೇ ತರಹ ಯೋಗೇಶ್ವರ್ ಸಹ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ ಗೊಂದಲ ಉಂಟು ಮಾಡಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.

mp-srinivas-prasad-talk
ಸಂಸದ ಶ್ರೀನಿವಾಸ್ ಪ್ರಸಾದ್

By

Published : Jun 2, 2021, 7:50 PM IST

ಮೈಸೂರು:ಸಿ.ಪಿ.ಯೋಗೇಶ್ವರ್ ಹೇಳಿಕೆ ಕೊಟ್ಟ ಮೇಲೆ ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ‌ ಗೊಂದಲವಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಒಪ್ಪಿಕೊಂಡಿದ್ದಾರೆ.

ಸಂಸದ ಶ್ರೀನಿವಾಸ್ ಪ್ರಸಾದ್

ಓದಿ: ಕೋವಿಡ್ 3ನೇ ಅಲೆ ಸಿದ್ಧತೆ: ವಾರದಲ್ಲಿ ಸರ್ಕಾರಕ್ಕೆ ಕಾರ್ಯಪಡೆ ವರದಿ ಸಲ್ಲಿಕೆ

ಇಂದು ತಮ್ಮ‌ ಮನೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೊದಲು ಯತ್ನಾಳ್ ಹೇಳಿಕೆಗಳಿಂದ ಗೊಂದಲ ಮೂಡುತ್ತಿತ್ತು. ಆದರೆ, ಈಗ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ಕೊಟ್ಟ ಮೇಲೆ ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ ಗೊಂದಲ ಶುರುವಾಗಿದೆ.

ದೆಹಲಿಗೆ ಹೋಗಿ ವಿಜಯೇಂದ್ರ, ಯೋಗೇಶ್ವರ್ ಬಗ್ಗೆ ದೂರು ಕೊಟ್ಟಿದ್ದಾರೆ. ಅದೇ ತರಹ ಯೋಗೇಶ್ವರ್ ಸಹ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ ಗೊಂದಲ ಉಂಟು ಮಾಡಿದೆ. ಹೈಕಮಾಂಡ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಚರ್ಚೆ ಬೇಡ ಎಂದಿದೆ, ಸದ್ಯಕ್ಕೆ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದರು.

ನಿನ್ನೆ ಸಿ.ಟಿ‌. ರವಿ ನನ್ನನ್ನು ಭೇಟಿ ಮಾಡಿದ್ದರು, ಇಲ್ಲಿ‌ ನಾವು ರಾಜಕೀಯ ವಿಚಾರದ ಬಗ್ಗೆ ಮಾತನಾಡಿಲ್ಲ, ಸೌಹಾರ್ದಯುತ ಭೇಟಿ ಅಷ್ಟೆ ಎಂದರು.

ಚಾಮರಾಜನಗರ ದುರಂತ:

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಶಿಕ್ಷೆ ಕೊಡುವುದು ಹೇಳುವಷ್ಟು ಸುಲಭವಲ್ಲ, ತಮ್ಮ ಪ್ರಾಣವನ್ನು ಮುಡುಪಿಟ್ಟು ಕೆಲಸ ಮಾಡುತ್ತಿದ್ದಾರೆ‌. ನಾನು ಈಗಾಗಲೇ ಜಿಲ್ಲಾಡಳಿತದ ಜೊತೆ ಮಾಹಿತಿ ಪಡೆದಿದ್ದೇನೆ. ಸರಿಯಾಗಿ ತನಿಖೆ ಪೂರ್ಣಗೊಳ್ಳಲಿ, ಈ ಬಗ್ಗೆ ನಿವೃತ್ತ ನ್ಯಾಯಾಧೀಶರ ತಂಡದಿಂದ ವರದಿ ಬರಲಿ ಆಮೇಲೆ ಶಿಕ್ಷೆ ಮಾತು ಎಂದರು.

ಮೈಸೂರು ಜಿಲ್ಲಾಧಿಕಾರಿ ಹಾಗೂ ಸಂಸದ ಪ್ರತಾಪ್‌‌ ಸಿಂಹ ನಡುವಿನ ತಿಕ್ಕಾಟವನ್ನು ಕೂತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಕೋವಿಡ್ ಪರಿಸ್ಥಿತಿ ಕೆಟ್ಟದಾಗಿದ್ದು, ಇಂತಹ ಸಂದರ್ಭದಲ್ಲಿ ಇದು ಒಳ್ಳೆಯದಲ್ಲ. ಉಸ್ತುವಾರಿ ಸಚಿವರು ಚರ್ಚೆ ಮಾಡಿ ಬಗೆಹರಿಸಬೇಕೆಂದು ಸಲಹೆ ನೀಡಿದರು.

ABOUT THE AUTHOR

...view details