ಕರ್ನಾಟಕ

karnataka

ETV Bharat / city

ಪಿಎಸ್​ಐ ಪರೀಕ್ಷಾ ಹಗರಣದಲ್ಲಿ ಕಾಂಗ್ರೆಸ್​ನಿಂದ ಅಶ್ವತ್ಥ್​ ನಾರಾಯಣ ಟಾರ್ಗೆಟ್​: ಪ್ರತಾಪ್ ಸಿಂಹ - MP pratap simha spoke on PSI scam

ಪಿಎಸ್​ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವತ್ಥ್​ ನಾರಾಯಣ ಅವರನ್ನು ಕಾಂಗ್ರೆಸ್​ ಟಾರ್ಗೆಟ್​ ಮಾಡಿದೆ. ದಾಖಲೆ ಇಲ್ಲದಿದ್ದರೂ ಅವರನ್ನು ವಿನಾಕಾರಣ ಕೇಸ್​ನಲ್ಲಿ ಎಳೆದು ತರಲಾಗಿದೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ.

mp-pratap-simha
ಪ್ರತಾಪ್ ಸಿಂಹ

By

Published : May 4, 2022, 8:44 PM IST

ಮೈಸೂರು:ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಸಚಿವ ಅಶ್ವತ್ಥ್​ ನಾರಾಯಣ್ ಅವರನ್ನು ವೈಯಕ್ತಿಕವಾಗಿ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ಯಾವುದೇ ದಾಖಲೆ ಇಲ್ಲದೇ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದರು.

ಪಿಎಸ್ಐ ಹಗರಣದಲ್ಲಿ ದರ್ಶನ್ ಗೌಡ ಎಂಬುವವರು ಸಿಕ್ಕಿಬಿದ್ದಿದ್ದಾರೆ. ಅವರಿಗೂ ಅಶ್ವತ್ಥ್​ ನಾರಾಯಣ್​ಗೂ ಸಂಬಂಧ ಕಲ್ಪಿಸಲು ಹೋಗಬೇಡಿ. ಸಚಿವರು ಸಾವಿರಾರು ಕೋಟಿಯ ಸೆಮಿ ಕಂಡಕ್ಟರ್ ಘಟಕವನ್ನು ಕೊಡಿಸಿದ್ದಾರೆ. ಅದರ ಬಗ್ಗೆ ಮಾತನಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಬದಲಿಗೆ ಪಿಎಸ್ಐ ಹಗರಣದಲ್ಲಿ ಸಿಲುಕಿಸಲು ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂತೋಷ್ ಹೇಳಿಕೆಗೆ ಸಹಮತವಿದೆ:ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್​ ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತ ಇದೆ. ಸಂತೋಷ್ ಹಾಗೂ ಉಳಿದವರು ಅವಕಾಶ ನೀಡಿದ್ದರಿಂದ ನಾನು ಎರಡನೇ ಬಾರಿಗೆ ಸಂಸದನಾಗಿದ್ದೇನೆ. ಇಂತಹ ವಿಶೇಷ ಪ್ರಯತ್ನ ಮೋದಿಯವರ ನೇತೃತ್ವದಲ್ಲಿ ಸದಾ ಆಗುತ್ತಿರುತ್ತದೆ. ಪೊಲೀಸ್ ಇಲಾಖೆ, ಕ್ರೀಡಾ ಕ್ಷೇತ್ರದಿಂದ ರಾಜಕಾರಣಿಗಳಾಗಿದ್ದಾರೆ. ಯಾರು ಕೆಲಸ ಮಾಡುತ್ತಾರೋ ಅವರು ರಾಜಕಾರಣದಲ್ಲಿ ಇರುತ್ತಾರೆ, ಮಾಡದವರು ಮನೆಗೆ ಹೋಗುತ್ತಾರೆ ಎಂದರು.

ಓದಿ:ಅಕ್ರಮ ನೇಮಕಾತಿಗೆ ಸರ್ಕಾರವೇ ಅಂಗಡಿ ತೆರೆದಿದೆ.. ಅಶ್ವತ್ಥ್ ನಾರಾಯಣ ಅತ್ಯಂತ ಭ್ರಷ್ಟ ಸಚಿವ.. ಡಿಕೆಶಿ

ABOUT THE AUTHOR

...view details