ಮೈಸೂರು:ಜನರ ಸಮಸ್ಯೆಯನ್ನ ಪರಿಹರಿಸುವುದು ನಮ್ಮ ಜವಾಬ್ದಾರಿ, ಇದರಲ್ಲಿ ಕ್ರೆಡಿಟ್ ಪ್ರಶ್ನೆ ಬರುವುದಿಲ್ಲ. ಕ್ರೆಡಿಟ್ ಅಂದರೆ ಏನು ಎಂದು ಸಂಸದ ಪ್ರತಾಪ್ ಸಿಂಹ ಅವರು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಬೆಂಗಳೂರು ನಡುವಿನ ಹೈವೇ ನಿರ್ಮಾಣದ ವೇಳೆ ಸಬ್ ವೇಗಳು ಹಾಗೂ ಸೇತುವೆಗಳನ್ನು ಜನರ ಮನವಿಗೆ ಅನುಗುಣವಾಗಿ ಮಾಡಿಸುತ್ತಿದ್ದು, ಮೈಸೂರಿಗೆ ಹೈ ವೇ ತರುತ್ತಿದ್ದೇನೆ. ಈ ಮಧ್ಯೆ ಸಮಸ್ಯೆಗಳಾದರೆ ಅದನ್ನು ಪರಿಹರಿಸುವುದು ನಮ್ಮ ಜವಾಬ್ದಾರಿ. ಆ ಕೆಲಸವನ್ನೇ ನಾನು ಮಾಡುತ್ತಿದ್ದೇನೆ ಎಂದರು.