ಕರ್ನಾಟಕ

karnataka

ETV Bharat / city

ಅಮ್ಮನ ಪಾದ ತೊಳೆದು ಆಶೀರ್ವಾದ ಪಡೆದ ಬಿಜೆಪಿ ಕಾರ್ಯಕರ್ತರು - ಅಮ್ಮನ ಪಾದ ತೊಳೆದು ಆಶೀರ್ವಾದ ಪಡೆದ ಬಿಜೆಪಿ ಕಾರ್ಯಕರ್ತರು

ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ನಗರದ ಕೆ.ಆರ್.ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ತಮ್ಮ ತಾಯಂದಿರ ಪಾದಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

Mother's day celebration by BJP activists in Mysore
ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ತಾಯಂದಿರ ದಿನಾಚರಣೆ

By

Published : May 9, 2022, 7:00 AM IST

ಮೈಸೂರು:ವಿಶ್ವ ತಾಯಂದಿರ ದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ತಮ್ಮ ತಾಯಂದಿರ ಪಾದಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವ ವಿನೂತನ ಕಾರ್ಯಕ್ಕೆ ಕೆ.ಆರ್.ನಗರ ಕ್ಷೇತ್ರ ಸಾಕ್ಷಿಯಾಯಿತು. ಕಾರ್ಯಕರ್ತರು ತಮ್ಮ ತಾಯಿಯಂದಿರ ಪಾದಗಳನ್ನು ತೊಳೆದು ಅರಿಶಿನ, ಕುಂಕುಮ ಹಾಗೂ ಗಂಧಾಕ್ಷತೆಗಳಿಂದ ಪೂಜಿಸಿ ಸೀರೆಯನ್ನು ಉಡುಗೊರೆಯಾಗಿ ನೀಡಿದರು.

ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ತಾಯಂದಿರ ದಿನಾಚರಣೆ

ಕಾರ್ಯಕ್ರಮದಲ್ಲಿ ಮೂವರು ಮಹಿಳಾ ಸಾಧಕಿಯರಾದ ವಿಂದ್ಯಾ (ಕೆಎಎಸ್​​), ಸೌಮ್ಯ(ಸಮಾಜ ಸೇವೆ), ಲತಾ ಮಣಿ (ವೈದ್ಯಕೀಯ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ನಮ್ಮಲ್ಲೆರಿಗೂ ಮೂವರು ತಾಯಂದಿರು. ಜನ್ಮಕೊಟ್ಟ ತಾಯಿ, ಭೂಮಿ ತಾಯಿ ಹಾಗೂ ಇಡೀ ವಿಶ್ವವನ್ನು ಸೃಷ್ಟಿಸಿದ ತಾಯಿ. ಪ್ರತಿಕ್ಷಣ ನಾವು ಈ ಮೂವರು ತಾಯಂದಿರನ್ನು ಸ್ಮರಿಸಿದರೆ ಮಾತ್ರ ಜೀವನದಲ್ಲಿ ಮೇಲೆ ಬರಲು ಸಾಧ್ಯ ಎಂದರು.

ಇದನ್ನೂ ಓದಿ:ಕೋಟಿ ವೆಚ್ಚದಲ್ಲಿ ಏಕ ಶಿಲೆಯ 'ಅಮ್ಮನ ದೇಗುಲ' ನಿರ್ಮಿಸುತ್ತಿರುವ ಪುತ್ರ..

ABOUT THE AUTHOR

...view details