ಮೈಸೂರು : ಅಂದಿನ ಕಾಲದ ಅರಸರು ತಮ್ಮ ಪ್ರೀತಿಯ ಶ್ವಾನಗಳ ನೆನಪಿಗಾಗಿ ಅವುಗಳ ಹೆಸರು ಹಾಗೂ ಅವುಗಳು ಮರಣ ಹೊಂದಿರುವ ದಿನಾಂಕವನ್ನೊಳಗೊಂಡ ಕಲ್ಲಿನ ಸ್ಮಾರಕವನ್ನು ಸ್ಥಾಪಿಸಿದ್ದರು. ಇಂತಹುದೇ ಒಂದು ವಿಶೇಷ ಸ್ಮಾರಕ ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಜಯಲಕ್ಷ್ಮಿ ವಿಲಾಸ್ ಅರಮನೆ ಆವರಣದಲ್ಲಿದೆ.
ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಜಯಲಕ್ಷ್ಮಿ ವಿಲಾಸ್ ಅರಮನೆ ಆವರಣದಲ್ಲಿ ಶ್ವಾನಕ್ಕೆ ಸ್ಮಾರಕ ನಿರ್ಮಾಣ ಮಾಡಲಾಗಿದೆ.. ಈ ಬಗ್ಗೆ ಜಯಲಕ್ಷ್ಮಿ ವಿಲಾಸ್ ಅರಮನೆಯ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಆದ ಡಾ. ನಾಗರಾಜ್ ಅವರು ಈಟಿವಿ ಭಾರತ್‌ನೊಂದಿಗೆ ಮಾತನಾಡಿದ್ದಾರೆ. ಹಿಂದೆ ರಾಜರು ವಾಸವಾಗಿದ್ದ ಕಾಲದಲ್ಲಿ ಶ್ವಾನಗಳನ್ನು ಸಾಕಿದ್ದರು. ಪ್ರೀತಿಯಿಂದ ಸಾಕಿದ ಶ್ವಾನಗಳು ಮೃತಪಟ್ಟಾಗ ಅವುಗಳನ್ನು ಬೇರೆ ಕಡೆಗಳಲ್ಲಿ ಅಂತ್ಯಕ್ರಿಯೆ ಮಾಡಿ ಕಲ್ಲಿನ ಸ್ಮಾರಕ ಸ್ಥಾಪಿಸಲಾಗಿತ್ತು.
ಆದರೆ, ಆ ಜಾಗದಲ್ಲಿ ಇಂದು ಮುಕ್ತ ವಿವಿಯ ಕಟ್ಟಡ ನಿರ್ಮಾಣವಾಗಿರುವುದರಿಂದ ಅಲ್ಲಿನ ಶ್ವಾನಗಳ ಕಲ್ಲಿನ ಸ್ಮಾರಕಗಳನ್ನು ಸ್ಥಳಾಂತರ ಮಾಡಿ ಜಯಲಕ್ಷ್ಮಿ ವಿಲಾಸ್ ಅರಮನೆಯ ಆವರಣದಲ್ಲಿ ತಂದು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿ ಟಾಮ್, ಬಾಬಿ, ಮಿಕ್ಕಿ, ಮಿನ್ನಿ, ಮಿಟ್ಸೇಜ್ ಗೈರ್ಸ್ ಎಂಬ ಐದು ಶ್ವಾನಗಳ ಕಲ್ಲಿನ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಶ್ವಾನಗಳು ಮರಣ ಹೊಂದಿದ ದಿನಾಂಕವನ್ನು ಸ್ಮಾರಕದ ಮೇಲೆ ಬರೆಯಲಾಗಿದೆ. ಇದನ್ನು ನೋಡಿದರೆ ಅಂದಿನ ರಾಜ ಮನೆತನದವರಿಗೆ ಶ್ವಾನಗಳ ಮೇಲೆ ಎಷ್ಟು ಪ್ರೀತಿ ಇತ್ತು ಎಂದು ತಿಳಿಯುತ್ತದೆ.
ಓದಿ :ನೀರಾವರಿ ಯೋಜನೆಗಳನ್ನು ಜಾರಿಗೆ ತರದಿದ್ದರೆ ಜೆಡಿಎಸ್ ವಿಸರ್ಜನೆ.. ಚಾಮುಂಡಿ ಬೆಟ್ಟದಲ್ಲಿ ಹೆಚ್ಡಿಕೆ ಶಪಥ