ಕರ್ನಾಟಕ

karnataka

ETV Bharat / city

ಟಿಪ್ಪು ಕುರಿತ ಸತ್ಯವನ್ನು ಸುಳ್ಳಾಗಿಸಲು ಸಾಧ್ಯವಿಲ್ಲ.. ಪಠ್ಯದಿಂದ ತೆಗೆದ್ರೂ ಜನರ ಹೃದಯದಿಂದ ತೆಗೆಯಲಾಗಲ್ಲ.. ಹೆಚ್ ವಿಶ್ವನಾಥ್ - ಟಿಪ್ಪು ಸುಲ್ತಾನ್​ ಬಗ್ಗೆ ಎಂಎಲ್​​ಸಿ ಹೆಚ್​ ವಿಶ್ವನಾಥ್​ ಮಾತು

ಟಿಪ್ಪು 80 ಸಾವಿರ ಕೊಡವರನ್ನು ಕೊಂದ ಎಂದು ಹೇಳುತ್ತಾರೆ. 250 ವರ್ಷದ ಹಿಂದೆ ಅಲ್ಲಿ ಅಷ್ಟು ಜನಸಂಖ್ಯೆ ಇತ್ತಾ? ಟಿಪ್ಪು ಕುರಿತ ಸತ್ಯವನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಟಿಪ್ಪು ಯಾರಿಗೂ ತಲೆಬಾಗಿಲ್ಲ. ಟಿಪ್ಪುವನ್ನು ಪುಸ್ತಕದಿಂದ ತೆಗೆದು ಹಾಕಿದರೂ ಭಾರತೀಯರ ಹೃದಯದಲ್ಲಿ ಸದಾ ನೆನಪಿನಲ್ಲಿ ಇರುತ್ತಾರೆ ಎಂದು ಹೇಳಿದರು..

vishwanath
ವಿಶ್ವನಾಥ್

By

Published : Apr 9, 2022, 10:29 PM IST

ಮೈಸೂರು :ಟಿಪ್ಪು ಈ ನಾಡಿನ ಮಣ್ಣಿನ ಮಗ, ಮೈಸೂರು ಹುಲಿ. ಶತ್ರುವಿನ ಮುಂದೆ ಶರಣಾಗದ ಜಗತ್ತಿನ ಏಕೈಕ ವೀರ. ಈತನ ಕುರಿತ ಸತ್ಯವನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಎಂಎಲ್​ಸಿ ಹೆಚ್. ವಿಶ್ವನಾಥ್ ಟಿಪ್ಪುವಿನ ಬಗ್ಗೆ ಹಾಡಿ ಹೊಗಳಿದ್ದಾರೆ. ಇಂದು ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರೊ.ಪಿ.ವಿ ನಂಜರಾಜೇ ಅರಸು ಅವರು ಬರೆದಿರುವ 'ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್​' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಟಿಪ್ಪು ಕುರಿತು ಸತ್ಯವನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ: ಎಂಎಲ್​ಸಿ​ ಹೆಚ್ ವಿಶ್ವನಾಥ್

ಟಿಪ್ಪು ಜಗತ್ತಿನ ಮಾನ್ಯತೆಗೆ ಒಳಗಾದ ಚಕ್ರವರ್ತಿ. ಕೇಸರಿಯನ್ನು ಒಂದು ಧರ್ಮದವರು, ಹಸಿರನ್ನು ಒಂದು ಧರ್ಮದವರು ಕಿತ್ತುಕೊಂಡಿದ್ದಾರೆ. ಕಾಮಾಲೆ ಕಣ್ಣಿಂದ, ಮತಾಂಧತೆ ಕಣ್ಣಿನಿಂದ ಟಿಪ್ಪುವನ್ನು ನೋಡಬೇಡಿ. ಟಿಪ್ಪು 80 ಸಾವಿರ ಕೊಡವರನ್ನು ಕೊಂದ ಎಂದು ಹೇಳುತ್ತಾರೆ. 250 ವರ್ಷದ ಹಿಂದೆ ಅಲ್ಲಿ ಅಷ್ಟು ಜನಸಂಖ್ಯೆ ಇತ್ತಾ? ಟಿಪ್ಪು ಕುರಿತ ಸತ್ಯವನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಟಿಪ್ಪು ಯಾರಿಗೂ ತಲೆಬಾಗಿಲ್ಲ. ಟಿಪ್ಪುವನ್ನು ಪುಸ್ತಕದಿಂದ ತೆಗೆದು ಹಾಕಿದರೂ ಭಾರತೀಯರ ಹೃದಯದಲ್ಲಿ ಸದಾ ನೆನಪಿನಲ್ಲಿ ಇರುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಬಿಟ್ಟು ಜೆಡಿಎಸ್​ಗೆ ಬಂದಾಗಲೂ ಇದನ್ನೇ ಹೇಳಿದ್ದೆ. ಈ ದೇಶದ ಎಲ್ಲಾ ಧರ್ಮ ಗುರುಗಳು ಯಾಕೆ ಮೌನವಾಗಿದ್ದೀರಾ.? ಇವತ್ತಿನ ಸ್ಥಿತಿಯನ್ನು ಯಾಕೆ ಖಂಡಿಸುತ್ತಿಲ್ಲ. ಅನುದಾನದ ಕಾರಣಕ್ಕೆ ಸರ್ಕಾರದ ವಿರುದ್ದ ಮಾತಾಡ್ತಿಲ್ವಾ.? ಅನ್ನ ಕಿತ್ತುಕೊಳ್ಳುವ ಕೆಲಸ ರಾಜ್ಯದಲ್ಲಿ ನಡೆಯತ್ತಿದೆ. ಮಠಾಧೀಶರು ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ತಮ್ಮ ಮೌನ ಮುರಿಯಬೇಕು. ಭಾರತವನ್ನು ಸಮರ್ಥವಾಗಿ ಕಟ್ಟುವಲ್ಲಿ ಎಲ್ಲಾ ಧರ್ಮದ ಪಾತ್ರ ದೊಡ್ಡದಿದೆ. ಇದನ್ನು ಬೇರ್ಪಡಿಸುವ ಕೆಲಸ ಮಾಡಬೇಡಿ ಎಂದು ಎಂ‌ಎಲ್​ಸಿ ಹೆಚ್ ವಿಶ್ವನಾಥ್ ತಿಳಿಸಿದರು.

ಓದಿ:ರಾಜ್ಯದಲ್ಲಿ ಗೋಶಾಲೆ ಆರಂಭಿಸದ ಸರ್ಕಾರ : ಹೈಕೋರ್ಟ್ ತೀವ್ರ ಅಸಮಾಧಾನ

For All Latest Updates

TAGGED:

ABOUT THE AUTHOR

...view details