ಕರ್ನಾಟಕ

karnataka

ETV Bharat / city

'ಬೆತ್ತಲೆ ಜಗತ್ತ'ಲ್ಲಿ ಸಂಸದ ಪ್ರತಾಪ್​ ಸಿಂಹ ಏನು ಬರೆದಿದ್ದಾರೆ ಹೇಳಲಿ: ಯತೀಂದ್ರ ಸಿದ್ದರಾಮಯ್ಯ - ಪ್ರತಾಪ್​ ಸಿಂಹ ಟೀಕಿಸಿದ ಯತೀಂದ್ರ

ಸಂಸದ ಪ್ರತಾಪ್​ ಸಿಂಹ ವಿರುದ್ಧ ಶಾಸಕ ಯತೀಂದ್ರ ಸಿದ್ದರಾಮಯ್ಯ ಟೀಕೆ- ಸಾಹಿತಿ ದೇವನೂರ ಮಹಾದೇವರನ್ನು ಟೀಕಿಸಿದ್ದಕ್ಕೆ ಟಾಂಗ್​- 'ಬೆತ್ತಲೆ ಜಗತ್ತು' ಬಗ್ಗೆ ಪ್ರಸ್ತಾಪ

ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ

By

Published : Jul 14, 2022, 3:37 PM IST

ಮೈಸೂರು:‌ಸಾಹಿತಿ ದೇವನೂರು ಮಹಾದೇವ ಅವರುಬರೆದ ಆರ್​ಎಸ್​ಎಸ್​: ಆಳ ಅಗಲ ಕೃತಿಯನ್ನು 'ವಿಕೃತಿ' ಎಂದು ಜರಿದಿರುವ ಸಂಸದ ಪ್ರತಾಪ್​ ಸಿಂಹ ಅವರ ಟೀಕೆಗೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಅವರನ್ನು ಕಾಂಗ್ರೆಸ್​ ಅಡಿಯಾಳು ಎಂದು ಟೀಕಿಸಿದ ಸಂಸದರ ಮನಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಕಿಡಿಕಾರಿದರು.

'ಬೆತ್ತಲೆ ಜಗತ್ತಲ್ಲಿ' ಸಂಸದ ಪ್ರತಾಪ್​ ಸಿಂಹ ಏನು ಬರೆದಿದ್ದಾರೆ ಹೇಳಲಿ: ಯತೀಂದ್ರ ಸಿದ್ದರಾಮಯ್ಯ

ಪ್ರತಾಪ್ ಸಿಂಹ ಅವರು ಹಿಂದೆ ಏನು ಬರೆಯುತ್ತಿದ್ದರು ಎಂಬುದನ್ನು ಅವರೇ ನೆನಪು ಮಾಡಿಕೊಳ್ಳಲಿ. ವಿಕೃತಿಯ ಕೃತಿಗಳನ್ನು ಯಾರಾದರೂ ಬರೆದಿದ್ದರೆ ಅದು ಪ್ರತಾಪ್ ಸಿಂಹ ಮಾತ್ರ. ಬಿಜೆಪಿ ನಾಯಕರ ವಿರುದ್ಧ 'ಬೆತ್ತಲೆ ಜಗತ್ತು' ಎಂಬ ಕೃತಿ ಬರೆದರು. ಇಂದು ಅದೇ ಪಕ್ಷಕ್ಕೆ ಸೇರಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರತಾಪ್​ ಸಿಂಹ ಅವರು ಜನಪ್ರತಿನಿಧಿಗಳೋ ಅಥವಾ ಆರ್​ಎಸ್​ಎಸ್​ನ ಅಡಿಯಾಳೋ ಎಂಬುದನ್ನು ತಿಳಿಸಲಿ. ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕಾದ ಸಂಸದರು, ಆರ್​ಎಸ್ಎಸ್​ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಏನು ಪ್ರಯೋಜನ ಎಂದು ಕುಟುಕಿದರು.

ಓದಿ:ಕಾಂಗ್ರೆಸ್ ನಲ್ಲಿ ಸಿದ್ದು-ಡಿಕೆಶಿ ನಡುವೆ ನಿಲ್ಲದ ಶೀತಲ ಸಮರ.. ಇಬ್ಬರಿಂದಲೂ ಪ್ಲಾನ್, ಮಾಸ್ಟರ್ ಪ್ಲಾನ್

ABOUT THE AUTHOR

...view details