ಕರ್ನಾಟಕ

karnataka

ETV Bharat / city

ಆತುರಕ್ಕೆ ಬಿದ್ದು ಶಾಲೆ ತೆರೆಯುವುದು ಬೇಡ: ಶಾಸಕ ಸಾ.ರಾ.ಮಹೇಶ್

ಈಗ ಶಾಲೆ ತೆರೆಯಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ನಾನು ಹೇಳುವುದೆಂದರೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ತೆರೆಯುವುದು ಬೇಡ. ಈ‌ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

mla sara mahesh talk about school open
ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲ, ಶಾಸಕ ಸಾ.ರಾ.ಮಹೇಶ್

By

Published : Sep 29, 2020, 4:39 PM IST

ಮೈಸೂರು: ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ತೆರೆಯುವುದು ಮಕ್ಕಳ ದೃಷ್ಟಿಯಿಂದ ಸರಿಯಲ್ಲ, ಈ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಮಾಜಿ ಸಚಿವ ಹಾಗೂ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.

ಆತುರಕ್ಕೆ ಬಿದ್ದು ಶಾಲೆ ತೆರೆಯುವುದು ಬೇಡ: ಶಾಸಕ ಸಾ.ರಾ.ಮಹೇಶ್

ಈಗ ಶಾಲೆ ತೆರೆಯಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ನಾನು ಹೇಳುವುದೆಂದರೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ತೆರೆಯುವುದು ಬೇಡ. ಈ‌ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ಇದರ ಜೊತೆಗೆ ನಾನು ನಿಜ ಹೇಳಬೇಕೆಂದರೆ ವಿಧಾನಸಭೆಗೆ ಹೋಗಿ ಚರ್ಚೆ ಮಾಡಬೇಕು ಎಂಬ ಆಸೆ ಇತ್ತು. ಆದರೆ ಅಲ್ಲಿ ಯಾರಿಗೆ ಕೊರೊನಾ ಇದೆ ಎಂದು ಗೊತ್ತಾಗುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಅವರಿಗೆ ಪಾಸಿಟಿವ್ ಬಂದ ಬಗ್ಗೆ ಘಟನೆಯನ್ನು ವಿವರಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಆತುರಕ್ಕೆ ಬಿದ್ದು, ಶಾಲೆ ಪ್ರಾರಂಭ ಮಾಡಬೇಡಿ. ಶಾಲೆ ಆರಂಭಿಸಿದ್ದರು ಮಕ್ಕಳನ್ನು ಶಾಲೆಗೆ ಕಳುಹಿಸುವ ಸ್ಥಿತಿಯಲ್ಲಿ ತಂದೆ ತಾಯಿಗಳು ಇಲ್ಲ ಎಂದು ಇದೇ ಸಂದರ್ಭದಲ್ಲಿ ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ABOUT THE AUTHOR

...view details